ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಮಹಾ ವಿಕಾಸ ಅಘಾಡಿ ಸರ್ಕಾರಕ್ಕೆ ಕ್ಷಣ ಕ್ಷಣಕ್ಕೂ ಪತನ ಭೀತಿ ಹೆಚ್ಚುತ್ತಿದ್ದು, ಈ ನಡುವೆ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಸಚಿವ ಏಕನಾಥ್ ಶಿಂಧೆ ಹಾಗೂ ಟೀಂ ಖಡಕ್ ಸಂದೇಶ ರವಾನಿಸಿದೆ.
ಗುವಾಹಟಿ ರೆಸಾರ್ಟ್ ನಲ್ಲಿ ಬೀಡು ಬಿಟ್ಟಿರುವ ಏಕನಾಥ್ ಶಿಂಧೆ ಹಾಗೂ ಬಂಡಾಯ ಶಾಸಕರ ತಂಡ, ನಮ್ಮ ನಿಲುವು ಅಚಲ, ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಹೇಳುವ ಮೂಲಕ ಠಾಕ್ರೆ ಸರ್ಕಾರವನ್ನು ಬೆಂಬಲಿಸಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಸಾಯಿಸಿದ ಕ್ರೂರಿ ತಂದೆ
ಕಾಂಗ್ರೆಸ್ ಹಾಗೂ ಎನ್ ಸಿ ಪಿ ಮೈತ್ರಿಗೆ ನಮ್ಮ ವಿರೋಧವಿದೆ. ನಮ್ಮದು ಹಿಂದೂತ್ವದ ಆಧಾರದ ಮೇಲೆ ಮೈತ್ರಿ ರಚನೆ. ಹೀಗಾಗಿ ನಮ್ಮ ನಿಲುವಿನಲ್ಲಿ ಬದಲಾವಣೆಯಿಲ್ಲ ಎಂದು ಏಕನಾಥ್ ಶಿಂಧೆ ತಿಳಿಸಿದ್ದಾರೆ.
ಈ ಮೂಲಕ ಶಿಂಧೆ ಹಾಗೂ ಟೀಂ ಬಿಜೆಪಿ ನಾಯಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆಯೇ? ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.