ಬೆಂಗಳೂರು: ಆ ದಿನಗಳು ಖ್ಯಾತಿಯ ಸ್ಯಾಂಡಲ್ ವುಡ್ ನಟ ಚೇತನ್ ನಾಪತ್ತೆಯಾಗಿದ್ದಾರೆ. ಕಿಡ್ನ್ಯಾಪ್ ಆಗಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ ಎಂದು ಚೇತನ್ ಪತ್ನಿ ಮೇಘಾ ಆತಂಕ ವ್ಯಕ್ತಪಡಿಸಿದ್ದಾರೆ.
ಫೇಸ್ ಬುಕ್ ಲೈವ್ ಗೆ ಬಂದ ಮೇಘಾ ಚೇತನ್, ಇಂದು ಮಧ್ಯಾಹ್ನದಿಂದ ಪತಿ ಚೇತನ್ ಕಾಣಿಸುತ್ತಿಲ್ಲ. ಸ್ಥಳೀಯರು ಹೇಳುವ ಪ್ರಕಾರ ಮಧ್ಯಾಹ್ನ ಅವರನ್ನು ಪೊಲೀಸರು ಬಂದು ಕರೆದೊಯ್ದಿದ್ದಾರೆ ಎನ್ನುತ್ತಿದ್ದಾರೆ. ಆದರೆ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿದರೆ ಅಲ್ಲಿಯೂ ಕೂಡ ಚೇತನ್ ಇಲ್ಲ. ಚೇತನ್ ಕಾಣಿಸುತ್ತಿಲ್ಲ ಎಂದು ದೂರು ನೀಡಿದರೆ ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಪೊಲೀಸರೇ ಅವರನ್ನು ಕರೆದೊಯ್ದಿದ್ದಾರಾ ಅಥವಾ ಇಲ್ಲವೆ ಎಂಬುದು ಗೊತ್ತಾಗುತ್ತಿಲ್ಲ. ಚೇತನ್ ಅವರನ್ನು ಯಾರಾದರೂ ಅಪಹರಿಸಿದ್ದಾರೆಯೇ ಎಂಬ ಆತಂಕ ಕೂಡ ವ್ಯಕ್ತವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.