ಚೀನಾದ ದಕ್ಷಿಣ ಪ್ರಾಂತ್ಯದ ಹುನಾನ್ ನ Changsha ನಗರದ ಬಹುಮಹಡಿ ಕಟ್ಟಡ ಡೌನ್ ಟೌನ್ ಗೆ ಬೆಂಕಿ ತಗುಲಿದ್ದು, ಅಡಿಯಿಂದ ತುದಿಯವರೆಗೂ ಧಗಧಗನೆ ಉರಿಯುತ್ತಿದೆ.
ಈ ಕಟ್ಟಡದಲ್ಲಿ ಕಛೇರಿಗಳು ಇದ್ದವೆಂದು ಹೇಳಲಾಗಿದ್ದು, ಸಾವು ನೋವಿನ ಕುರಿತು ಯಾವುದೇ ಮಾಹಿತಿ ತಿಳಿದುಬಂದಿಲ್ಲ.
ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.