ಬೆಂಗಳೂರು: ಚಾಲೇಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವಿನ ಜಟಾಪಟಿಗೆ ಮೂಲ ಕಾರಣ ಡೊಡ್ಮನೆ ಆಸ್ತಿ ಮೇಲೆ ದರ್ಶನ್ ಕಣ್ಣಿಟ್ಟಿದ್ದರು… ಎಂಬ ವಿಚಾರ ಇದೀಗ ಬಹಿರಂಗವಾಗಿದೆ.
ನಟ ಪುನೀತ್ ರಾಜ್ ಕುಮಾರ್ ಹಾಗೂ ರಾಘವೆಂದ್ರ ರಾಜ್ ಕುಮಾರ್ ಅವರಿಂದ ರೆಸಿಡೆನ್ಸಿಯಲ್ ರಸ್ತೆಯಲ್ಲಿನ ಜಾಗವನ್ನು ನಿರ್ಮಾಪಕ ಉಮಾಪತಿ ಖರೀದಿಸಿದ್ದರು. ಈ ಪ್ರಾಪರ್ಟಿ ಮೇಲೆ ಕಣ್ಣಿಟ್ಟಿದ್ದ ದರ್ಶನ್ ಆ ಜಾಗ ತನಗೆ ಬೇಕು ಎಂದು ಉಮಾಪತಿ ಬಳಿ ಹಠ ಹಿಡಿದಿದ್ದರು ಎನ್ನಲಾಗಿದೆ. ಆದರೆ ಉಮಾಪತಿ ಇದು ದೊಡ್ಮನೆ ಆಸ್ತಿಯಾಗಿದ್ದು, ಅವರಿಂದ ನಾನು ಖರೀದಿ ಮಾಡಿರುವುದರಿಂದ ನಿಮಗೆ ಕೊಡಲಾಗದು. ಅದು ನನ್ನ ಸ್ವಂತಕ್ಕಾಗಿ ಖರೀದಿಸಿದ್ದಾಗಿ ದರ್ಶನ್ ಗೆ ಹೇಳಿದ್ದಾರೆ. ಅಲ್ಲದೇ ಅದರ ಬದಲು ಬೇರೆ 2 ಎಕರೆ ಜಾಗವನ್ನು ಕೊಡುವುದಾಗಿ ದರ್ಶನ್ ಗೆ ಮನವರಿಕೆ ಮಾಡಿದ್ದಾಗಿ ಅದಕ್ಕೆ ದರ್ಶನ್ ಒಪ್ಪಿಕೊಂಡಿದ್ದರು ಎಂಬ ವಿಚಾರವನ್ನು ಇದೀಗ ಸ್ವತಃ ಉಮಾಪತಿ ಬಹಿರಂಗಪಡಿಸಿದ್ದಾರೆ.
ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಂಡ ನಟಿ ತಾನ್ಯಾ ಹೋಪ್
ಆದರೆ ಪುನೀತ್ ರಾಜ್ ಕುಮಾರ್ ಅವರಿಂದ ಹಿಂದೆಯೇ ತಾನು ಆ ಜಾಗ ಖರೀದಿಸಿದ್ದರಿಂದ ಸಧ್ಯದ ಘಟನಾವಳಿಗಳಲ್ಲಿ ಪುನೀತ್ ಹೆಸರಾಗಲಿ, ದೊಡ್ಮನೆ ಹೆಸರಾಗಲಿ ಚರ್ಚಿಸುವ ಪ್ರಶ್ನೆಯೇ ಬರಲ್ಲ ಎಂದು ಉಮಾಪತಿ ತಿಳಿಸಿದ್ದಾರೆ
ದೊಡ್ಮನೆ ಪ್ರಾಪರ್ಟಿ ಕಾರಣಕ್ಕೆ ನಟ ದರ್ಶನ್ ಹಾಗೂ ಉಮಾಪತಿ ನಡುವೆ ಮನಸ್ತಾಪ ಆರಂಭವಾಗಿ ಪುದುಚೇರಿಯಲ್ಲಿ ನಡೆದ ಸಿನಿಮಾ ಶೂಟಿಂಗ್ ಗೂ ಬಾರದೇ ದರ್ಶನ್ ಸಮಸ್ಯೆ ಮಾಡಿದ್ದಾರೆ ಎನ್ನಲಾಗಿದೆ. ದೊಡ್ಮನೆ ಪ್ರಾಪರ್ಟಿಗೆ ಆಸೆಪಟ್ಟು ಅಲ್ಲಿಂದ ಆರಂಭವಾದ ದರ್ಶನ್ ಹಾಗೂ ಉಮಾಪತಿ ನಡುವಿನ ವೈಮನಸ್ಯ 25 ಕೋಟಿ ವಂಚನೆ ಗೆ ಯತ್ನ ಪ್ರಕರಣ ಹಾಗೂ ಆ ನಂತರದ ಘಟನೆಗಳವರೆಗೂ ಬಂದು ನಿಂತಿದೆ ಎಂದು ತಿಳಿದುಬಂದಿದೆ.