ನವದೆಹಲಿ: 19 ಕೆಜಿ ವಾಣಿಜ್ಯ ಎಲ್.ಪಿ.ಜಿ. ಸಿಲಿಂಡರ್ ಬೆಲೆ ಇಳಿಕೆ ಮಾಡಲಾಗಿದೆ. ಪ್ರತಿ ಸಿಲಿಂಡರ್ ಗೆ 135 ರೂಪಾಯಿಯಷ್ಟು ಇಳಿಕೆಯಾಗಿದೆ.
ದರ ಪರಿಷ್ಕರಣೆ ನಂತರ ದೆಹಲಿಯಲ್ಲಿ ವಾಣಿಜ್ಯಸಿಲಿಂಡರ್ ದರ 2219 ರೂ., ಕೋಲ್ಕತ್ತಾದಲ್ಲಿ 2322 ರೂ., ಮುಂಬೈನಲ್ಲಿ 2171.50 ರೂ., ಚೆನ್ನೈನಲ್ಲಿ 2373 ರೂ. ಆಗಿದೆ.
ಗೃಹಬಳಕೆಯ ಎಲ್.ಪಿ.ಜಿ. ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೊಸ ದರಗಳು ಇಂದಿನಿಂದ ಜಾರಿಗೆ ಬರಲಿವೆ.