ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ವಿರುದ್ದ ಅಧಿಕೃತವಾಗಿ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ್ದಾರೆ. ಈ ಮೂಲಕ ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ದದ ಕಾರ್ಮೋಡ ಈಗ ನಿಜವಾಗಿದೆ.
ಅಮೆರಿಕಾ, ಐರೋಪ್ಯ ಒಕ್ಕೂಟಗಳ ವಿರೋಧದ ನಡುವೆಯೂ ರಷ್ಯಾ, ಉಕ್ರೇನ್ ವಿರುದ್ದ ಯುದ್ದ ಆರಂಭಿಸಿದೆ. ಹೀಗಾಗಿ ರಷ್ಯಾ ವಿರುದ್ದ ಬಹುತೇಕ ದೇಶಗಳು ನಿರ್ಬಂಧ ವಿಧಿಸುವುದು ಖಚಿತವಾಗಿದೆ.
ರಷ್ಯಾ – ಉಕ್ರೇನ್ ನಡುವಿನ ಬಿಕ್ಕಟ್ಟು ಹಿನ್ನಲೆಯಲ್ಲಿ ಇದರ ಪರಿಣಾಮ ಭಾರತದ ಮೇಲೂ ಆಗಲಿದೆ ಎನ್ನಲಾಗಿದೆ. ಅದರಲ್ಲೂ ಆರ್ಥಿಕ ಪರಿಸ್ಥಿತಿ ಮೇಲೆ ಈ ಬಿಕ್ಕಟ್ಟು ಸಾಕಷ್ಟು ಪ್ರಭಾವ ಬೀರಲಿದೆ. ತೈಲ ಬೆಲೆ ಏರಿಕೆ ಜೊತೆಗೆ ಚಿನ್ನಾಭರಣಗಳ ಬೆಲೆಯೂ ಇನ್ನಷ್ಟು ಹೆಚ್ಚಳವಾಗಲಿದೆ.