ಉಕ್ರೇನ್ ಮೇಲೆ ಯುದ್ದ ನಡೆಸಲು ರಷ್ಯಾ ತಯಾರಿ ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ಅಲ್ಲಿನ ಸಂಸತ್ತು, ರಷ್ಯಾ ಹೊರಗೂ ಸಹ ಸೇನೆ ಬಳಕೆಗೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಗ್ರೀನ್ ಸಿಗ್ನಲ್ ನೀಡಿದೆ.
ಈ ಬೆಳವಣಿಗೆ ಹಿನ್ನಲೆಯಲ್ಲಿ ಈ ಯುದ್ದವನ್ನು ತೀವ್ರವಾಗಿ ವಿರೋಧಿಸುತ್ತಿರುವ ಅಮೆರಿಕಾ, ರಷ್ಯಾ ವಿರುದ್ದ ಹಲವು ನಿರ್ಬಂಧಗಳನ್ನು ವಿಧಿಸಿದೆ. ರಷ್ಯಾ ಗಣ್ಯರಿಗೆ ಅಮೆರಿಕಾ ಭೇಟಿ ನಿಷೇಧಿಸಿರುವ ಜೊತೆಗೆ ರಷ್ಯಾ ಮಿಲಿಟರಿ ಬ್ಯಾಂಕ್ ಮೇಲೂ ನಿರ್ಬಂಧ ಹೇರಲಾಗಿದೆ.
ಇದರ ಮಧ್ಯೆಯೂ ರಷ್ಯಾದೊಂದಿಗೆ ತಾನು ರಾಜತಾಂತ್ರಿಕ ಮಾತುಕತೆಗೆ ಸಿದ್ದ ಎಂದು ಅಮೆರಿಕಾ ತಿಳಿಸಿದ್ದು, ಆದರೆ ಅದಕ್ಕೂ ಮುನ್ನ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ರಷ್ಯಾ ಸೇನೆ ನಿಯೋಜನೆ ನಿರ್ಧಾರದಿಂದ ಹಿಂದೆ ಸರಿದರೆ ಮಾತ್ರ ಈ ಮಾತುಕತೆ ಫಲಪ್ರದವಾಗಲು ಸಾಧ್ಯ ಎಂದು ಶ್ವೇತ ಭವನದ ವಕ್ತಾರರು ತಿಳಿಸಿದ್ದಾರೆ.