ತನ್ನ ಪುತ್ರಿ ಶೀನಾ ಬೋರಾಳನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಆರೂವರೆ ವರ್ಷಗಳಿಂದ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿಗೆ ಸುಪ್ರೀಂ ಕೋರ್ಟ್ ಕೊನೆಗೂ ಜಾಮೀನು ಮಂಜೂರು ಮಾಡಿದೆ.
ಹೈ ಪ್ರೂಪೈಲ್ ಕೇಸ್ ಎಂದೇ ಪರಿಗಣಿತವಾಗಿದ್ದ ಈ ಪ್ರಕರಣದಲ್ಲಿ ಇಂದ್ರಾಣಿ ಮುಖರ್ಜಿ ಸೇರಿದಂತೆ ಹಲವರನ್ನು ಬಂಧನಕ್ಕೊಳಪಡಿಸಲಾಗಿತ್ತು. ಇದೀಗ ಇಂದ್ರಾಣಿ ಮುಖರ್ಜಿಗೆ ಆರೂವರೆ ವರ್ಷಗಳ ಜೈಲು ವಾಸದ ಬಳಿಕ ಜಾಮೀನು ಮಂಜೂರಾಗಿದೆ.