
ಅನಿವಾಸಿ ಭಾರತೀಯರು ಇನ್ನು ಮುಂದೆ ಆಧಾರ್ ಕಾರ್ಡ್ ಪಡೆಯಲು 182 ದಿನಗಳ ಕಾಲ ಕಾಯುವ ಅಗತ್ಯವನ್ನು ಇಲ್ಲವಾಗಿಸಿರುವ ಭಾರತೀಯ ವಿಶಿಷ್ಟ ಗುರತು ಪ್ರಾಧಿಕಾರ, ಪಾಸ್‌ಪೋರ್ಟ್ ಇದ್ದವರಿಗೆ ದೇಶಕ್ಕೆ ಆಗಮಿಸುತ್ತಲೇ ಆಧಾರ್ ಕಾರ್ಡ್ ವಿತರಿಸಲಿದೆ.
“ಅನಿವಾಸಿ ಭಾರತೀಯರು 182 ದಿನಗಳ ಕಾಲ ಕಾಯುವ ಅಗತ್ಯವಿಲ್ಲ. ಅಸ್ತಿತ್ವದಲ್ಲಿರುವ ಭಾರತೀಯ ಪಾಸ್‌ಪೋರ್ಟ್ ಇದ್ದವರಿಗೆ ದೇಶಕ್ಕೆ ಆಗಮಿಸುತ್ತಲೇ ಆಧಾರ್ ಕಾರ್ಡ್ ದೊರೆಯಲಿದೆ. ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ಕೊಡಿ:
https://appointments.uidai.gov.in/easearch.aspx. ಹೆಚ್ಚಿನ ವಿವರಗಳಿಗಾಗಿ 1947ಕ್ಕೆ ಕರೆ ಮಾಡಿ ಅಥವಾ elp@uidai.gov.in ವಿಳಾಸಕ್ಕೆ ಬರೆಯಿರಿ,” ಎಂದು ಯುಐಡಿಎಐ ಟ್ವೀಟ್ ಮಾಡಿದೆ.
ಕುರಿಗಳ ಹಿಂಡಿನಿಂದ ಅರಳಿದ ಕಲೆ: ಈ ಮೂಲಕ ಅಗಲಿದ ಚಿಕ್ಕಮ್ಮನಿಗೆ ಕೃಷಿಕನ ಶ್ರದ್ಧಾಂಜಲಿ
ಪ್ರಾಪ್ತ ವಯಸ್ಸಿಗೆ ಬಾರದವರು ಅಥವಾ ವಯಸ್ಕರು, ಭಾರತೀಯ ಪಾಸ್‌ಪೋರ್ಟ್ ಇರುವ ಯಾರು ಬೇಕಾದರೂ ಆಧಾರ್ ಕೇಂದ್ರದ ಮುಖಾಂತರ ಆಧಾರ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ.