ಬೀದರ್: 19 ವರ್ಷದ ಯುವಕನೊಬ್ಬ ಸೆಲ್ಫಿ ಸ್ಟೇಟಸ್ ಹಾಕಿ ಬಳಿಕ ನೇಣಿಗೆ ಕೊರಳೊಡ್ಡಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧರ್ಮಪ್ರಕಾಶ್ ಗಲ್ಲಿಯಲ್ಲಿ ನಡೆದಿದೆ.
ಬಾಲಕೃಷ್ಣ ಕರೆಪ್ಪ ನೇಣಿಗೆ ಶರಣಾದ ಯುವಕ. ಪದೇ ಪದೇ ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮನೆಯಲ್ಲಿ ಬೆದರಿಸುತ್ತಿದ್ದನಂತೆ. ಆದರೆ ಇಂದು ಬೆಳಿಗ್ಗೆ ಸೆಲ್ಫಿ ಸ್ಟೇಟಸ್ ಹಾಕಿದ್ದ ಯುವಕ ಕೆಲ ಹೊತ್ತಲ್ಲೇ ಧರ್ಮಪ್ರಕಾಶ್ ಗಲ್ಲಿಯ ಸಮುದಾಯ ಭವನದಲ್ಲಿ ನೇಣಿಗೆ ಶರಣಾಗಿದ್ದಾನೆ.
ಯುವಕನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮದ್ಯದ ಅಮಲಿನಲ್ಲಿ ನೇಣಿಗೆ ಕೊರಳೊಡ್ಡಿರುವ ಶಂಕೆ ವ್ಯಕ್ತವಾಗಿದೆ. ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.