ಬೀದರ್: ಬೀದರ್ ನಗರದಲ್ಲಿ ಮನೆ ಮುಂದೆಯೇ ದುರಂತವೊಂದು ಸಂಭವಿದೆ. ಕಾರು ಹರಿದು ಮೂರು ವರ್ಷದ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಗರದ ಗುಂಪಾರಸ್ತೆಯಲ್ಲಿ ನಡೆದಿದೆ.
ಬಸವ ಚೇತನ ಮೂರು ವರ್ಷದ ಮೃತ ಮಗು. ಮಗು ಏಕಾಂಗಿಯಾಗಿ ಮನೆಯ ಮುಂದಿನ ರಸ್ತೆಯ ತಿರುವು ಬಳಿ ರಸ್ತೆ ದಾಟಿ ಹೋಗಿದೆ. ಈ ವೇಳೆ ಬಂದ ಇನ್ನೋವಾ ಕಾರಿನ ಚಕ್ರಕ್ಕೆ ಮಗು ಸಿಲುಕಿದ್ದು, ಮಗುವಿನ ಮೇಲೆಯೇ ಕಾರು ಹರಿದು ಹೋಗಿದೆ. ಮಗು ರಸ್ತೆಯಲ್ಲಿಯೇ ಪ್ರಾಣ ಬಿಟ್ಟಿದೆ. ಈ ಭೀಕರ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಗು ಮನೆಯಿಂದ ಆಚೆ ಬಂದು ರಸ್ತೆ ದಾಟಿದರೂ ಪೋಷಕರಿಗೆ ಮಗುವಿನ ಬಗ್ಗೆ ಗಮನವಿಲ್ಲ. ತಂದೆ-ತಾಯಿಗಳ ನಿರ್ಲಕ್ಷ್ಯಕ್ಕೆ ಪುಟ್ಟ ಕಂದಮ್ಮ ಬಲಿಯಾಗಿದೆ.
ಮೃತ ಬಸವ ಚೇತನ ಹಾರುಗೇರಿ ನಿವಾಸಿ ಸತೀಶ್ ಪಾಟೀಲ್ ಹಾಗೂ ಸಂಗೀತಾ ದಂಪತಿ ಪುತ್ರ. ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.