ರಾಮನಗರ: ಮನೆಯೊಂದರಲ್ಲಿ 25ಕ್ಕೂ ಹೆಚ್ಚು ಬುರುಡೆಗಳು ಪತ್ತೆಯಾಗಿದ್ದು, ವ್ಯಕ್ತಿಯೋರ್ವ ಮಾಟಮಂತ್ರ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಮನೆತುಂಬೆಲ್ಲ ಇರುವ ಬುರುಡೆಗಳು, ವಿಚಿತ್ರ ವಸ್ತುಗಳನ್ನು ಕಂಡು ಶಾಕ್ ಆಗಿದ್ದಾರೆ.
ರಾಮನಗರ ಜಿಲ್ಲೆಯ ಬಿಡದಿ ಬಳಿಯ ಜೋಗನಹಳ್ಳಿಯ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ. ಬಲರಾಮ್ ಎಂಬಾತ ತೋಟದ ಮನೆಯಲ್ಲಿ ಬುರುಡೆಗಳನ್ನು, ಮೂಳೆಗಳನ್ನು ಸಂಗ್ರಹಿಸಿದ್ದು, ಮನೆತುಂಬೆಲ್ಲ ಬರಿ ಬುರುಡೆಗಳೇ ಇವೆ. ರಾತ್ರಿ ವೇಳೆ ಬಲರಾಮ್ ಎಂಬಾತ ಸ್ಮಶಾನದಲ್ಲಿ ಪೂಜೆ ಮಾಡುತ್ತಿದ್ದ. ಇದನ್ನು ಕಂಡ ಸ್ಥಳೀಯರು ಮನೆ ಬಳಿ ಬಂದು ಪರಿಶೀಲಿಸಿದ್ದಾರೆ ಆಗ ಬುರುಡೆಗಳು ಇರುವುದು ಪತ್ತೆಯಾಗಿದ್ದು, ಬಲರಾಮ್ ಮಾಟ ಮಂತ್ರ ಮಾಡುತ್ತಾನೆ ಎಂಬ ಆರೋಪ ಕೇಳಿಬಂದಿದೆ.
ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಲರಾಮ್ ನನ್ನು ಬಂಧಿಸಿದ್ದಾರೆ.