
ರಾಮನಗರ: ಬಿಡದಿ ಬಳಿಯ ಪ್ರತಿಷ್ಠಿತ ಕಾರ್ಖಾನೆಯ ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನ ಪರ ಬರಹ ಬರೆದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಿಡದಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಉತ್ತರ ಕರ್ನಾಟಕದ ಹೈಮದ್ ಹುಸೇನ್, ಸಾಧಿಕ್ ಎಂದು ಗುರುತಿಸಲಾಗಿದೆ. ಕನ್ನಡಿಗರ ಬಗ್ಗೆಯೂ ಅವಾಚ್ಯವಾಗಿ ಬರೆದಿದ್ದು, ದೇಶದ್ರೋಹ, ಕನ್ನಡಿಗರಿಗೆ ಅವಮಾನ ಪ್ರಕರಣಗಳ ಅಡಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಿಡಡಿ ಬಳಿಯ ಟೊಯೊಟ ಬುಷೋಕೊ ಕಾರ್ಖಾನೆಯ ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನದ ಪರ ಜಯಕಾರದ ಬರಹ ಬರೆಯಲಾಗಿತ್ತು. ಅಲ್ಲದೇ ಕನ್ನಡಿಗರನ್ನು ಅವಾಚ್ಯವಾಗಿ ನಿಂದಿಸಿದ ಬರಹ ಕೂಡ ಪತ್ತೆಯಾಗಿತ್ತು.