ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ಲರ್ಕ್ ನೇಮಕಾತಿಯ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಎಸ್.ಬಿ.ಐ. ಕ್ಲರ್ಕ್ ನೇಮಕಾತಿ ಮುಖ್ಯ ಪರೀಕ್ಷೆ ಬರೆದ ಅಭ್ಯರ್ಥಿಗಳು ಎಸ್.ಬಿ.ಐ. ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಫಲಿತಾಂಶ ಪರಿಶೀಲಿಸಬಹುದು.
ಎಸ್.ಬಿ.ಐ. ಕ್ಲರ್ಕ್ ಮುಖ್ಯ ಪರೀಕ್ಷೆಯನ್ನು ಅಕ್ಟೋಬರ್ 1 ರಿಂದ ಅಕ್ಟೋಬರ್ 17ರವರೆಗೆ ನಡೆಸಲಾಗಿತ್ತು. ಈ ನೇಮಕಾತಿ ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು sbi.co.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಫಲಿತಾಂಶದ ಪಿಡಿಎಫ್ ಫೈಲ್‌ನಲ್ಲಿ ತಮ್ಮ ರೋಲ್ ಸಂಖ್ಯೆಯನ್ನು ಪರಿಶೀಲಿಸಬಹುದು. ಅಭ್ಯರ್ಥಿಗಳು ಇಲ್ಲಿ ನೀಡಿರುವ ನೇರ ಲಿಂಕ್‌ನಲ್ಲಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು.
ಎಸ್.ಬಿ.ಐ. ಕ್ಲರ್ಕ್ ಮುಖ್ಯ ಫಲಿತಾಂಶಗಳನ್ನು ಪರಿಶೀಲಿಸಲು ನೇರ ಲಿಂಕ್ ಕ್ಲಿಕ್ ಮಾಡಬಹುದು. ಮೊದಲು ಎಸ್.ಬಿ.ಐ. ವೆಬ್‌ಸೈಟ್ sbi.co.in/career ಗೆ ಭೇಟಿ ನೀಡಿ. ಮುಖಪುಟದಲ್ಲಿ RECRUITMENT OF JUNIOR ASSOCIATES (CUSTOMER SUPPORT & SALES)(Final Result Announced) (Advertisement No. CRPD/CR/2021-22/09) ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಫಲಿತಾಂಶ ಪಿಡಿಎಫ್ ಫೈನ್ ನಲ್ಲಿ ಬರುತ್ತದೆ. ಅದರಲ್ಲಿ ರೋಲ್ ನಂಬರ್ ಪರಿಶೀಲನೆ ಮಾಡಬೇಕು. ಅದರ ಮುದ್ರಣ ಪಡೆಯಬಹುದು. ಈ ಪಟ್ಟಿ ತಾತ್ಕಾಲಿಕವಾಗಿರುತ್ತದೆ.
ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳು ಭಾಷಾ ಪ್ರಾವೀಣ್ಯತೆ ಪರೀಕ್ಷೆಗೆ (LPT) ಹಾಜರಾಗಬೇಕಾಗುತ್ತದೆ. ಈ ಸುತ್ತಿನ ನಂತರ ಆಯ್ಕೆಯಾದವರು ಅಂತಿಮವಾಗಿ ಸಂಸ್ಥೆಯಲ್ಲಿ ಕ್ಲರ್ಕ್ ಆಗಿ ನೇಮಕಗೊಳ್ಳುತ್ತಾರೆ.
10 ನೇ ತರಗತಿ ಮತ್ತು 12 ನೇ ತರಗತಿಯಲ್ಲಿ LPT ಭಾಷೆಯನ್ನು ಆಯ್ಕೆ ಮಾಡಿದವರಿಗೆ ಎಸ್.ಬಿ.ಐ. ಭಾಷಾ ಪ್ರಾವೀಣ್ಯತೆಯ ಪರೀಕ್ಷೆ ನಡೆಸುತ್ತದೆ. ಈ ಅಭ್ಯರ್ಥಿಗಳಿಗೆ ಬ್ಯಾಂಕ್ ಆಯ್ಕೆಯಲ್ಲಿ ವಿನಾಯಿತಿ ನೀಡುತ್ತದೆ.
ಎಸ್.ಬಿ.ಐ. 5000 ಕ್ಕೂ ಹೆಚ್ಚು ಕ್ಲರ್ಕ್ ನೇಮಕಾತಿ ಮಾಡ್ತಿದೆ. ಆಯ್ಕೆಯಾದ ಅಭ್ಯರ್ಥಿಗಳ ಮೂಲ ವೇತನ ಸುಮಾರು 19,900 ರೂಪಾಯಿಯಿರುತ್ತದೆ. ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ವೇತನ ಶ್ರೇಣಿ 17,900 ರಿಂದ 47,920 ರೂಪಾಯಿಯಾಗಿರುತ್ತದೆ.