ಮಂಡ್ಯ: ಆಯುಧ ಪೂಜೆ ಮತ್ತು ವಿಜಯದಶಮಿ ಪ್ರಯುಕ್ತ ಎರಡು ದಿನಗಳ ಕಾಲ ವಿರಾಮದ ನಂತರ ಇಂದಿನಿಂದ ಐದನೇ ದಿನದ ‘ಭಾರತ್ ಜೋಡೋ ಯಾತ್ರೆ’ ಪುನರಾರಂಭವಾಗಿದೆ. ಇಂದಿನ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಜ್ಜೆ ಹಾಕಲಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೈಗೊಂಡಿರುವ ಭಾರದ್ ಜೋಡೋ ಯಾತ್ರೆಗೆ ರಾಜ್ಯದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ದಸರಾ ಹಬ್ಬದ ಪ್ರಯುಕ್ತ ಎರಡು ದಿನಗಳ ವಿರಾಮದ ನಂತರ ಇಂದಿನಿಂದ ಯಾತ್ರೆ ಮತ್ತೆ ಆರಂಭವಾಗಿದೆ.
ರಾಜ್ಯದಲ್ಲಿ ಐದನೇ ದಿನದ ಯಾತ್ರೆ ಮಂಡ್ಯ ಜಿಲ್ಲೆಯ ಬೆಳ್ಳಾರೆಯಿಂದ ಪ್ರಾರಂಭವಾಗಿದೆ. ಪಾಂಡವಪುರದ ಬೆಳ್ಳಾರೆ ಗ್ರಾಮದ ಬಳಿ ಮಹದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಆರಂಭವಾಗಿದೆ. ಬೆಳಗ್ಗೆ 11:30ಕ್ಕೆ ನಾಗಮಂಗಲದ ಖರಡ್ಕ ಕೆರೆ ಬಳಿ ಆಗಮಿಸಿ, ಊಟ, ವಿಶ್ರಾಂತಿ, ಮಧ್ಯಾಹ್ನ ಮಹಿಳಾ ಹಾಗೂ ರೈತ ಮುಖಂಡರೊಂದಿಗೆ ಸಂವಾದ ನಡೆಸಲಿದ್ದು, ನಂತರ ಬ್ರಹ್ಮದೇವರಹಳ್ಳಿ ಬಳಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಂವಾದ ನಡೆಯಲಿದೆ.
ಮಡಿಕೆಹೊಸೂರು ಗೇಟ್ ಬಳಿಯ ಆಯುಷ್ ಆಸ್ಪತ್ರೆ ಆಭರಣದಲ್ಲಿ ರಾತ್ರಿ ವಾಸ್ತವ್ಯ ಹೂಡಲಾಗುವುದು. ಬೆಳಿಗ್ಗೆ 11:30ಕ್ಕೆ ನಾಗಮಂಗಲಕ್ಕೆ ರಾಹುಲ್ ಗಾಂಧಿ ನೇತೃತ್ವದ ಯಾತ್ರೆ ಆಗಮಿಸಲಿದ್ದು ಕಾಂಗ್ರೆಸ್ ನಾಯಕ ಎನ್. ಚೆಲುವರಾಯಸ್ವಾಮಿ ಸೇರಿದಂತೆ ಹಲವು ನಾಯಕರು ಅದ್ದೂರಿ ಸ್ವಾಗತಕ್ಕೆ ಸಿದ್ಧತೆ ಕೈಗೊಂಡಿದ್ದಾರೆ.