ಭೋಪಾಲ: ಹೋಟೆಲ್ ಕೊಠಡಿಯಲ್ಲಿ ಹದಿನೈದು ವರ್ಷದ ಬಾಲಕಿಯನ್ನು ವಿವಾಹವಾದ ವ್ಯಕ್ತಿ, ಬಳಿಕ ಅದೇ ಕೊಠಡಿಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಯುವಕನನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ದ ಪೋಕ್ಸೋ ಕಾಯ್ದೆ ಮತ್ತು ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ.
ಬಾಲಕಿ 9ನೇ ತರಗತಿಯ ವಿದ್ಯಾರ್ಥಿನಿ. ಆಕೆಯನ್ನು ಹೋಟೆಲ್‌ಗೆ ಕರೆತರುವಾಗ ಆ ವ್ಯಕ್ತಿ ಆಕೆಯ ಹಣೆಗೆ ಸಿಂಧೂರ ಇಟ್ಟು ಕರೆತಂದಿದ್ದ. ಹೋಟೆಲ್ ಕೊಠಡಿಯಲ್ಲಿ ಸಾಂಕೇತಿಕ ವಿವಾಹವಾದ ಬಳಿಕ, ದೈಹಿಕ ಸಂಬಂಧ ಬೆಳೆಸಿದ್ದ. ಇದಾಗಿ ಕೆಲ ದಿನಗಳ ಅವಧಿಯಲ್ಲಿ ಮತ್ತೆ ಎರಡು ಬಾರಿ ದೈಹಿಕ ಸಂಪರ್ಕ ಮಾಡಿದ್ದ ಎಂದು ಹನುಮಗಂಜ್ ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಈ ತಪ್ಪುಗಳಿಂದಾಗಿ ಬೇಗ ಹಾಳಾಗುತ್ತೆ ʼಸ್ಮಾರ್ಟ್ ಫೋನ್ʼ
ಈ ಸಾಂಕೇತಿಕ ವಿವಾಹ ಮತ್ತು ನಂತರದ ವಿದ್ಯಮಾನದ ವಿವರವನ್ನು ಬಾಲಕಿ ತನ್ನ ಮನೆಯವರಿಗೆ ಕೆಲ ದಿನಗಳ ಬಳಿಕ ತಿಳಿಸಿದ್ದಳು. ಕೂಡಲೇ ಅವರು, ಯುವಕನ ಮನೆಯವರನ್ನು ಸಂಪರ್ಕಿಸಿದ್ದರು.
ಆದರೆ, ಅವರು ಆಕೆಯನ್ನು ಸೊಸೆಯನ್ನಾಗಿ ಸ್ವೀಕರಿಸಲು ನಿರಾಕರಿಸಿದರು. ಯುವಕ ಕೂಡ ಬಾಲಕಿ ಜತೆಗಿನ ಸಂಪರ್ಕ ಕಡಿದುಕೊಂಡ. ಹೀಗಾಗಿ, ಬಾಲಕಿಯ ಮನೆಯವರು ನೀಡಿದ ದೂರಿನ ಪ್ರಕಾರ, ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.