ಮಹಿಳಾ ದಿನಾಚರಣೆಯ ದಿನ ಭೋಪಾಲ್ನಲ್ಲಿ ನಾಚಿಕೆಗೇಡಿನ ಘಟನೆ ವರದಿಯಾಗಿದೆ. ಕೋಹ್-ಎ-ಫಿಜಾ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಕಾನ್‌ಸ್ಟೆಬಲ್ ತಡರಾತ್ರಿ ಸಾಮಂತರ್ ರಸ್ತೆಯ ಬಳಿ ಮಹಿಳೆಯೊಬ್ಬರನ್ನು ಅಶ್ಲೀಲವಾಗಿ ನಡೆಸಿಕೊಂಡಿರುವ ಘಟನೆ ನಡೆದಿದೆ.
ಆದಾಗ್ಯೂ, ಕಾನ್‌ಸ್ಟೆಬಲ್ ಆರೋಪಗಳನ್ನು ನಿರಾಕರಿಸಿದ್ದಾನೆ. ಮಹಿಳೆ ತನ್ನ ಸ್ನೇಹಿತೆಯಾಗಿದ್ದು, ಅವಳು ಅಮಲೇರಿದ ಸ್ಥಿತಿಯಲ್ಲಿದ್ದುದರಿಂದ ಅವನು ಅವಳಿಗೆ ಸಹಾಯ ಮಾಡಲು ಪ್ರಯತ್ನಿಸಿದುದಾಗಿ ಹೇಳಿದ್ದಾನೆ.
ಕೋಹ್-ಇ-ಫಿಜಾ ಪೊಲೀಸರ ಪ್ರಕಾರ, ಕಾನ್‌ಸ್ಟೆಬಲ್ ಪುಷ್ಪೇಂದ್ರ ಜಾಡೋನ್ ಮಹಿಳೆಯನ್ನು ರಾತ್ರಿ 11 ಗಂಟೆಗೆ ಭೇಟಿಯಾಗಿದ್ದಾನೆ. ಈ ಸಂದರ್ಭದಲ್ಲಿ ಅಮಲೇರಿದ ಸ್ಥಿತಿಯಲ್ಲಿದ್ದ ಮಹಿಳೆಗೆ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ತಾನು ಅವಳನ್ನು ಮನೆಗೆ ಬಿಡುವುದಾಗಿ ಹೇಳಿದುದಾಗಿ ಕಾನ್‌ಸ್ಟೆಬಲ್ ಹೇಳಿದ್ದಾನೆ.
ಮಹಿಳೆ ಮನೆಗೆ ಹೋಗಲು ನಿರಾಕರಿಸಿದ್ದರಿಂದ, ಜಾಡೋನ್ ಅವಳನ್ನು ತನ್ನ ಬೈಕ್‌ನಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದಾನೆ ಎಂದು ಆತ ಹೇಳಿಕೊಂಡಿದ್ದಾರೆ. ಆದರೆ ಈತ ಆಕೆಯ ಜೊತೆ ಅನುಚಿತವಾಗಿ ನಡೆದುಕೊಂಡಿರುವುದಾಗಿ ಆರೋಪಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಸಿಸಿ ಟಿವಿಯಲ್ಲಿ ಈ ದೃಶ್ಯ ದಾಖಲಾಗಿದೆ.