ಕೋವಿಡ್ ಸೋಂಕಿನ ಕಾಟದ ನಡುವೆ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಲೆಂದು ಮಧ್ಯ ಪ್ರದೇಶದ ಭೋಪಾಲ್‌ನ ಛಾಯಾಗ್ರಾಹಕರೊಬ್ಬರು ಒಂದು ತಿಂಗಳ ಅವಧಿಯಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಸವಾರಿ ಮಾಡಿದ್ದಾರೆ.
ವರುಣ್ ನಾಮದೇವ್ ಹಸರಿನ 30 ವರ್ಷ ವಯಸ್ಸಿನ ಈ ಛಾಯಾಗ್ರಾಹಕ 3,600 ಕಿಮೀ ಸೈಕ್ಲಿಂಗ್ ಮುಗಿಸಿ ಕಳೆದ ವಾರ ತಮ್ಮ ಊರಿಗೆ ಮರಳಿದ್ದಾರೆ. ’ನ್ಯೂ ಗಾಲ್ಫರ್ಸ್ ಸೈಕ್ಲಿಂಗ್ ಗ್ರೂಪ್’ನ ಸದಸ್ಯರಾದ ವರುಣ್ ಲಾಕ್‌ಡೌನ್‌ನಿಂದ ಸೃಷ್ಟಿಯಾಗಿದ್ದ ಮಾನಸಿಕ ಒತ್ತಡದಿಂದ ಆಚೆ ಬರಲು ಸೈಕ್ಲಿಂಗ್ ಆರಂಭಿಸಿದ್ದಾರೆ. ’ಪೆಡಲ್ ಫಾರ್ ಮೆಂಟಲ್ ಹೆಲ್ತ್’ ಹೆಸರಿನಲ್ಲಿ ತಮ್ಮ ಸೈಕ್ಲಿಂಗ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ ವರುಣ್.
BIG BREAKING: ಫೆ. 28 ರ ವರೆಗೆ ಕೊರೋನಾ ಮಾರ್ಗಸೂಚಿ ವಿಸ್ತರಣೆ
ಡಿಸೆಂಬರ್ 13ರಂದು ಜಮ್ಮುವಿನ ಕಟ್ರಾದಿಂದ ಸೈಕ್ಲಿಂಗ್ ಆರಂಭಿಸಿದ ವರುಣ್ ಜನವರಿ 13ರಂದು ಕನ್ಯಾಕುಮಾರಿಯಲ್ಲಿ ತಮ್ಮ ಟ್ರಿಪ್ ಮುಗಿಸಿದ್ದಾರೆ.
“ನಾನು 24 ದಿನಗಳ ಮಟ್ಟಿಗೆ ಸೈಕ್ಲಿಂಗ್ ಮಾಡಿದೆ. ಬೈಸಿಕಲ್ ರಿಪೇರಿ ಮತ್ತು ದೇಹಕ್ಕೆ ವಿಶ್ರಾಂತಿಗೆಂದು ಆರು ದಿನಗಳನ್ನು ಮೀಸಲಿಟ್ಟೆ,” ಎಂದು ವರುಣ್ ತಿಳಿಸಿದ್ದಾರೆ. ಈ ದಿನಗಳಲ್ಲಿ ಪ್ರತಿನಿತ್ಯ 150 ಕಿಮೀ ಸರಾಸರಿಯಲ್ಲಿ ಸೈಕ್ಲಿಂಗ್ ಮಾಡಿದ್ದಾಗಿ ತಿಳಿಸಿದ್ದಾರೆ. ಉತ್ತರ ಭಾರತದ ಶೀತಗಾಳಿ ಹಾಗೂ ದಕ್ಷಿಣ ಭಾರತದ ದುರ್ಗಮ ಹಾದಿಗಳನ್ನು ಹಾದು ಹೋಗಲು ವರುಣ್ ಚೆನ್ನಾಗಿ ಹೋಂವರ್ಕ್ ಮಾಡಿಕೊಂಡೇ ತಮ್ಮ ಟ್ರಿಪ್ ಆರಂಭಿಸಿದ್ದರು.
ತಮ್ಮ ಈ ಟ್ರಿಪ್ ಭಾಗವಾಗಿ 12 ರಾಜ್ಯಗಳನ್ನು ಹಾದು ಹೋಗಿರುವ ವರುಣ್, ಯೋಗಾ ಮತ್ತು ವೇಟ್ ಟ್ರೇನಿಂಗ್‌ನಂಥ ಕಾರ್ಯಕ್ರಮಗಳ ಮೂಲಕ ಚೆನ್ನಾಗಿ ದೇಹವನ್ನು ಸಜ್ಜಾಗಿಸಿಕೊಂಡಿದ್ದರು.