ಭೋಪಾಲ್: ಕೊರೋನಾ ಭಯದಿಂದ ಪತ್ನಿಯಿಂದ ಅಂತರ ಕಾಯ್ದುಕೊಂಡ ವ್ಯಕ್ತಿಯೊಬ್ಬ ಪುರುಷತ್ವ ಪರೀಕ್ಷೆಗೆ ಒಳಗಾದ ವಿಚಿತ್ರ ಪ್ರಸಂಗವೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.
ಜೂನ್ 29 ರಂದು ಭೋಪಾಲ್ ನ ಯುವಕ, ಯುವತಿ ಮದುವೆಯಾಗಿದ್ದಾರೆ. ಮದುವೆಯ ನಂತರದಲ್ಲಿ ಯುವತಿ ಮನೆಯವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಪತ್ನಿಗೂ ಕೊರೋನಾ ಬಂದಿರಬಹುದು, ರೋಗ ಲಕ್ಷಣಗಳು ಇಲ್ಲದೆ ಸೋಂಕು ತಗಲಿರಬಹುದು ಎಂದು ಭಾವಿಸಿದ ಪತಿರಾಯ ಪತ್ನಿಯಿಂದ ದೈಹಿಕ ಅಂತರ ಕಾಯ್ದುಕೊಂಡಿದ್ದಾನೆ.
ಆತನಿಗೆ ಪುರುಷತ್ವ ಇಲ್ಲದ ಕಾರಣ ಈ ರೀತಿ ವರ್ತಿಸುತ್ತಿದ್ದಾನೆ ಎಂದು ಭಾವಿಸಿದ ಪತ್ನಿ ಗಲಾಟೆ ಮಾಡಿ ತವರುಮನೆ ಸೇರಿಕೊಂಡಿದ್ದಾಳೆ. ಪೋಷಕರಿಗೆ ಈ ಬಗ್ಗೆ ಹೇಳಿದ್ದು, ವೈವಾಹಿಕ ವ್ಯಾಜ್ಯಗಳ ಪರಿಹಾರ ಕೇಂದ್ರಕ್ಕೆ ದೂರು ನೀಡಲಾಗಿದೆ. ಡಿಸೆಂಬರ್ 2 ರಂದು ದೂರು ನೀಡಲಾಗಿದ್ದು, ಅಧಿಕಾರಿಗಳು ದಾಂಪತ್ಯ ಜೀವನ ಮುಂದುವರೆಯಲು ಪುರುಷತ್ವ ಪರೀಕ್ಷೆಗೆ ಒಳಗಾಗುವಂತೆ ಸಲಹೆ ನೀಡಿದ್ದಾರೆ.
ಇದನ್ನು ಒಪ್ಪಿದ ಪತಿ ಪುರುಷತ್ವ ಪರೀಕ್ಷೆ ಮಾಡಿಸಿಕೊಂಡಿದ್ದಾನೆ. ಯುವತಿ ಪೋಷಕರ ಜೊತೆಗೆ ಮಾತನಾಡಿ ಮಗಳನ್ನು ಮನೆ ಗಂಡನ ಮನೆಗೆ ಕಳುಹಿಸುವಂತೆ ತಿಳಿಸಿದ್ದು, ಗಂಡನಿಗೆ ಪುರುಷತ್ವ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದರಿಂದ ಪತ್ನಿ ಪತಿಯ ಮನೆಗೆ ಹೋಗಲು ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.