ಮುಂಬೈ: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ತಮ್ಮ ಮುಂಬರುವ ಹಾರರ್-ಕಾಮಿಡಿ ಚಿತ್ರ ‘ಭೂಲ್ ಭುಲೈಯಾ 2’ ಚಿತ್ರದಲ್ಲಿನ ರೀಟ್ ಪಾತ್ರದ ಫಸ್ಟ್ ಲುಕ್ ಅನ್ನು ಗುರುವಾರ ಬಹಿರಂಗಪಡಿಸಿದ್ದಾರೆ.
ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಮೋಷನ್ ಪೋಸ್ಟರ್ ಅನ್ನು ಪೋಸ್ಟ್ ಮಾಡಿದ್ದು, ಆ ಫೋಟೋದಲ್ಲಿ ಅವಳ ತಲೆಯ ಮೇಲೆ ಭಯಾನಕ ಕೈ ಇರುವುದನ್ನು ಕಂಡು ಕಿಯಾರಾ ಅಡ್ವಾಣಿ ಭಯಬೀತರಾಗಿರುವಂತೆ ತೋರುತ್ತಿದೆ.
ಪೋಸ್ಟ್‌ನಲ್ಲಿ, “ರೀಟ್ ನನ್ನು ಭೇಟಿ ಮಾಡಿ. ಮೋಸಹೋಗಬೇಡಿ, ಅವಳು ತುಂಬಾ ಸಿಹಿ ಅಲ್ಲ. ಭೂಲ್ ಭುಲೈಯಾ 2 ಚಿತ್ರಮಂದಿರಗಳಲ್ಲಿ 20 ಮೇ, 2022 ರಂದು ಬಿಡುಗಡೆಯಾಗುತ್ತಿದೆ” ಎಂದು ಬರೆದಿದ್ದಾರೆ.
‘ಭೂಲ್ ಭುಲೈಯಾ 2’ ಎಂಬುದು ನಟರಾದ ಅಕ್ಷಯ್ ಕುಮಾರ್ ಮತ್ತು ವಿದ್ಯಾ ಬಾಲನ್ ಅವರ 2007 ರಲ್ಲಿ ಬಿಡುಗಡೆಯಾದ ‘ಭೂಲ್ ಭುಲೈಯಾ’ ಚಿತ್ರದ ಮುಂದುವರಿದ ಭಾಗವಾಗಿದೆ. ಭೂಷಣ್ ಕುಮಾರ್ ನಿರ್ಮಾಣದ ಸೀಕ್ವೆಲ್ ನಲ್ಲಿ ನಟ ಕಾರ್ತಿಕ್ ಆರ್ಯನ್ ಮತ್ತು ಟಬು ಕೂಡ ನಟಿಸಲಿದ್ದಾರೆ
‘ಭೂಲ್ ಭುಲೈಯಾ 2’ ಸಿನಿಮಾಕ್ಕೆ ಅನೀಸ್ ಬಾಜ್ಮಿ ಆಕ್ಷನ್ ಕಟ್ ಹೇಳಿದ್ದಾರೆ. ಭೂಷಣ್ ಕುಮಾರ್, ಮುರಾದ್ ಖೇತಾನಿ, ಕ್ರಿಶನ್ ಕುಮಾರ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
