alex Certify ಮೇಕಪ್‌ ಮಾಡಿಸಿಕೊಳ್ಳುವಾಗಲೇ ಡಯಟ್‌ ಕಥೆ ಹೇಳಿದ ವಧು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇಕಪ್‌ ಮಾಡಿಸಿಕೊಳ್ಳುವಾಗಲೇ ಡಯಟ್‌ ಕಥೆ ಹೇಳಿದ ವಧು

ಮದುವೆ ಕಾರ್ಯಕ್ರಮಕ್ಕೂ ಮುನ್ನ ಡಯಟ್​ ಮಾಡುತ್ತಿದ್ದ ವಧು ತನಗೆ ಹಸಿವಾಗುತ್ತಿದೆ ಎಂದು ಹೇಳಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ಉಪಾಸನಾ ಎಂಬ ವಧು ತಾನು ಡಯಟ್​ ಮಾಡಿ 5 ಕೆಜಿ ಇಳಿಸಿದ್ದಾಗಿ ಹೇಳುತ್ತಾಳೆ. ಆದರೆ ಶಾಸ್ತ್ರದ ಕಾರಣದಿಂದಾಗಿ ತನಗೆ ಸರಿಯಾಗಿ ತಿನ್ನಲು ಆಗಲಿಲ್ಲ ಎಂದು ವಧು ಹೇಳುತ್ತಾಳೆ. ಶಾಸ್ತ್ರದಿಂದಾಗಿ ತಾನು ಬೆಳಗ್ಗೆ ತಿಂಡಿ ತಿನ್ನೋದು ಹಾಗಿರಲಿ ಒಂದು ಲೋಟ ಚಹ ಸಹ ಸೇವಿಸಿಲ್ಲ ಎಂದು ಹೇಳಿದ್ದಾಳೆ.

ನಾನು ಆಹಾರ ಸೇವಿಸೋದನ್ನ ಕಡಿಮೆ ಮಾಡಿದ್ದೇನೆ. ನಾನು 5 ಕೆಜಿ ತೂಕವನ್ನ ಇಳಿಸಿದ್ದೇನೆ. ನಾನು ತುಂಬಾ ಆಹಾರವನ್ನ ಸೇವಿಸುವವಳು. ಒಂದು ನಿನ್ನೆಯಿಂದ ಉಪವಾಸ ಮಾಡ್ತಿದ್ದೇನೆ. ಮದುವೆ ಕಾರಣದಿಂದಾಗಿ ಬೆಳಗ್ಗೆ ತಿನ್ನೋಕೂ ಆಗಲಿಲ್ಲ. ಸಂಜೆ ಕೂಡ ಸ್ವಲ್ಪ ತಿನ್ನೋಕೆ ಅವಕಾಶ ಸಿಗ್ತು. ಇಂದು ಬೆಳಗ್ಗೆಯಿಂದ ನಾನು ಏನನ್ನೂ ತಿಂದಿಲ್ಲ. ಚಹ ಕೂಡ ಸೇವಿಸಿಲ್ಲ ಎಂದು ಹೇಳಿದ್ದಾಳೆ.

ಒಮ್ಮೆ ಶಾಸ್ತ್ರಗಳು ಸಂಪೂರ್ಣವಾಗುತ್ತಿದ್ದಂತೆಯೇ ನಾನು ಇವರಿಗೆ ಹೇಳ್ತೇನೆ ಮೊದಲು ನನಗೆ ಊಟದ ತಟ್ಟೆ ನೀಡಿ ಎಂದು ಅಂತಾ ಹೇಳಿದ್ದಾಳೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...