
ದುನಿಯಾ ವಿಜಯ್ ಮತ್ತೊಮ್ಮೆ ನಿರ್ದೇಶಿಸಿ ನಾಯಕನಾಗಿ ಅಭಿನಯಿಸುತ್ತಿರುವ ‘ಭೀಮ’ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಭೀಮಾ ಚಿತ್ರ ತಂಡ, ಪ್ರಚಾರ ಕಾರ್ಯವನ್ನು ಶುರುಮಾಡುತ್ತಿದ್ದೇವೆ ನಿಮ್ಮ ಸಹಕಾರ ಬೆಂಬಲ ಇರಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಆಕ್ಷನ್ ಥ್ರಿಲ್ಲರ್ ಕಥಾಂದರ ಹೊಂದಿರುವ ಈ ಚಿತ್ರದಲ್ಲಿ ದುನಿಯಾ ವಿಜಯ್ ಸೇರಿದಂತೆ ಅಶ್ವಿನಿ, ಗೋಪಾಲ್ ದೇಶಪಾಂಡೆ, ಅಚ್ಯುತ್ ಕುಮಾರ್, ಕಲ್ಯಾಣಿ ರಾಜು, ಕಾಕ್ರೋಚ್ ಸುಧಿ, ರಂಗಾಯಣ ರಘು, ಬ್ಲಾಕ್ ಡ್ರ್ಯಾಗನ್ ಮಂಜು, ಆಶ್ ಮಿಲೋ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಜಗದೀಶ್ ಗೌಡ ಮತ್ತು ಕೃಷ್ಣ ಸಾರ್ಥಕ್ ಜಂಟಿಯಾಗಿ ನಿರ್ಮಿಸಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ.