ಹರಿದ್ವಾರದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ 61 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಬಿಹೆಚ್ಇಎಲ್ನ ಅಧಿಕೃತ ವೆಬ್ಸೈಟ್ hwr.bhel.com.ನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 10 ಕೊನೆಯ ದಿನಾಂಕವಾಗಿದೆ.
ಹುದ್ದೆ : ಪದವೀಧರ ಅಪ್ರೆಂಟಿಸ್
ಖಾಲಿ ಇರುವ ನೇಮಕಾತಿ : 36
ವೇತನ ಶ್ರೇಣಿ : ಮಾಸಿಕ 9000 ರೂ.
ಹುದ್ದೆ : ಟೆಕ್ನಿಷಿಯನ್ ಅಪ್ರೆಂಟಿಸ್
ನೇಮಕಾತಿ ಸಂಖ್ಯೆ : 25
ವೇತನ ಶ್ರೇಣಿ : 8000 ರೂ. ಮಾಸಿಕ
ಅರ್ಹತಾ ಮಾನದಂಡ
ಪದವಿಧರ ಅಪ್ರೆಂಟಿಸ್ : ಅಭ್ಯರ್ಥಿಗಳು ಇಂಜಿನಿಯರಿಂಗ್ ಪದವಿ ಪೂರೈಸಿರಬೇಕು.
ಟೆಕ್ನಿಷಿಯನ್ ಅಪ್ರೆಂಟಿಸ್ : ಅಭ್ಯರ್ಥಿಗಳು ಡಿಪ್ಲೋಮಾ ಪದವಿ ಪೂರೈಸಿರಬೇಕು.
ಅರ್ಜಿ ಸಲ್ಲಿಸುವ ವಿಧಾನ : ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ hwr.bhel.comನಲ್ಲಿ ಸೆಪ್ಟೆಂಬರ್ 10ರೊಳಗಾಗಿ ಅರ್ಜಿ ಸಲ್ಲಿಸಬೇಕು. ಆನ್ಲೈನ್ಅರ್ಜಿಯ ಜೊತೆಗೆ ಎಲ್ಲಾ ದೃಢೀಕೃತ ದಾಖಲೆಗಳನ್ನು ಉಪನಿರ್ದೇಶಕರು (ಹೆಚ್ಆರ್) ಕೊಠಡಿ ಸಂಖ್ಯೆ – 29, ಹೆಚ್ಆರ್ಎ ಇಲಾಖೆ, ಮುಖ್ಯ ನಿರ್ವಾಹಕ ಕಟ್ಟಡ ಹೆಚ್ಇಇಪಿ, ರಾಣಿಪುರ, ಹರಿದ್ವಾರ – 249403, ಉತ್ತರಾಖಂಡ್ ವಿಳಾಸಕ್ಕೆ ಸೆಪ್ಟೆಂಬರ್ 18ರೊಳಗಾಗಿ ಕಳುಹಿಸಬೇಕು.
ಸೆಲೆಕ್ಷನ್ ಲಿಸ್ಟ್ನ್ನು ನವೆಂಬರ್ 24ರಂದು ರಿಲೀಸ್ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಡಿಸೆಂಬರ್ 08 ರಿಂದ 14ರೊಳಗಾಗಿ ನೇಮಕಗೊಳ್ಳಲಿದ್ದಾರೆ.