ಹಿರಿಯ ನಟಿ ಭವ್ಯ ಇಂದು 59ನೇ ವಸಂತಕ್ಕೆ ಕಾಲಿಟ್ಟಿದ್ದು, ಸ್ಯಾಂಡಲ್ವುಡ್ನ ಹಲವಾರು ಹಿರಿಯ ಕಲಾವಿದರಿಂದ ಹಾಗೂ ಯುವ ನಟ ನಟಿಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
1983 ರಲ್ಲಿ ತೆರೆ ಕಂಡ ಸಿದ್ದಲಿಂಗಯ್ಯ ನಿರ್ದೇಶನದ ‘ಪ್ರೇಮಪರ್ವ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ ಇವರು ಅದೇ ವರ್ಷದಂದು ‘ಕಲ್ಲು ವೀಣೆ ನುಡಿಯಿತು’ ದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು. ಬಳಿಕ 1984 ರಂದು ‘ಬಡ್ಡಿ ಬಂಗಾರಮ್ಮ’ ‘ಪ್ರೇಮ ಜ್ಯೋತಿ’ ‘ಪ್ರಳಯಾಂತಕ’ ‘ಹೊಸ ಬಾಳು’ ‘ಒಡೆದ ಹಾಲು’ ಸೇರಿದಂತೆ 5 ಸಿನಿಮಾಗಳಲ್ಲಿ ತೆರೆ ಹಂಚಿಕೊಂಡರು
1995 ರ ಸಮಯದಲ್ಲಿ ಚಿತ್ರರಂಗದಿಂದ ದೂರ ಉಳಿದಿದ್ದ ಇವರು 2001ರಲ್ಲಿ ಬಿಡುಗಡೆಯಾದ ‘ನನ್ನ ಪ್ರೀತಿಯ ಹುಡುಗಿ’ ಚಿತ್ರದ ಮೂಲಕ ಮತ್ತೊಮ್ಮೆ ಕಂಬ್ಯಾಕ್ ಮಾಡಿದರು. ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ತಾಯಿ ಪಾತ್ರದಲ್ಲಿ ಮಿಂಚಿದರು.ನಟಿ ಭವ್ಯ ಇತ್ತೀಚಿಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುವ ‘ಮೈನಾ’ ಧಾರವಾಹಿಯಲ್ಲಿ ‘ಅರುಂಧತಿ’ ಪಾತ್ರದಿಂದ ಇನ್ನಷ್ಟು ಜನಪ್ರಿಯತೆ ಪಡೆದಿದ್ದಾರೆ.