alex Certify ಓಲಾ ಇ-ಮೋಟಾರ್ ಸೈಕಲ್‌ ಬಿಡುಗಡೆ ಖಚಿತಪಡಿಸಿದ ಭವಿಶ್ ಅಗರ್ವಾಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಲಾ ಇ-ಮೋಟಾರ್ ಸೈಕಲ್‌ ಬಿಡುಗಡೆ ಖಚಿತಪಡಿಸಿದ ಭವಿಶ್ ಅಗರ್ವಾಲ್

ಪೆಟ್ರೋಲ್ ದರ ಏರಿಕೆ ಹಿನ್ನೆಲೆ ಸಾಮಾನ್ಯ ಜನ ಇ- ವಾಹನಗಳತ್ತ ಗಮನ ಹರಿಸುತ್ತಿದ್ದಾರೆ‌. ಈ ವೇಳೆ ಹೆಚ್ಚು ಪ್ರಚಾರಕ್ಕೆ ಬಂದಿದ್ದು ಓಲಾ ಇ- ಸ್ಕೂಟರ್, ಅದರ ಬಗ್ಗೆ ಅನೇಕ ಕುತೂಹಲಗಳಿವೆ.

ಬೆಲೆ ದುಬಾರಿ, ಮೂಲ ಸೌಕರ್ಯ ಕೊರತೆ ಇತ್ಯಾದಿ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಓಲಾ ಕ್ಯಾಬ್ಸ್‌ನ ಸಹ-ಸಂಸ್ಥಾಪಕ ಭವಿಶ್ ಅಗರ್ವಾಲ್ ಶನಿವಾರ ಸಾಮಾಜಿಕ ಮಾಧ್ಯಮದ ಮೂಲಕ, ಎಲೆಕ್ಟ್ರಿಕ್ ಮೋಟಾರ್‌ ಸೈಕಲ್‌ಗಳು ಮತ್ತು ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರುಕಟ್ಟೆಗೆ ಬರುವ ವಿಷಯವನ್ನು ಖಚಿತಪಡಿಸಿದ್ದಾರೆ.

ವೈಯಕ್ತಿಕ ಸಾಲ ಪಡೆಯಲು ಇದು ಸಕಾಲವೇ…? ಇಲ್ಲಿದೆ ಆಪ್ತ ಸಲಹೆ

ರೈಡ್-ಹೇಲಿಂಗ್ ಕಂಪನಿಯು ಮುಂದಿನ ವರ್ಷ ಎಲೆಕ್ಟ್ರಿಕ್ ವಾಹನಗಳ ವಿವಿಧ ಮಾದರಿಗಳ ಕೆಲಸವನ್ನು ಪ್ರಾರಂಭಿಸುತ್ತದೆ ಎಂದು ಜಾಲತಾಣದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.

ಪ್ರಸ್ತುತ ಒಲಾ ಎಸ್ ಒನ್ ಮತ್ತು ಎಸ್ ಒನ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳು ಈಗಾಗಲೇ ಹಾಟ್‌ಕೇಕ್‌ಗಳಂತೆ ಮಾರಾಟವಾಗುತ್ತಿವೆ. ನವೆಂಬರ್ 11 ರಂದು, ಕಂಪನಿಯು ತಮ್ಮ ಗ್ರಾಹಕರಿಗೆ ತನ್ನ ಸ್ಕೂಟರ್‌ಗಳ ಟೆಸ್ಟ್ ಡ್ರೈವ್ ಪ್ರಾರಂಭಿಸಿತು. ಕಳೆದ ತಿಂಗಳು ಓಲಾ ತನ್ನ ಚೊಚ್ಚಲ ಎಲೆಕ್ಟ್ರಿಕ್ ಸ್ಕೂಟರ್‌ನ ಮಾರಾಟವು ಎರಡು ದಿನಗಳಲ್ಲಿ 1,100 ಕೋಟಿ ರೂ. ದಾಟಿದೆ ಎಂದು ಹೇಳಿತ್ತು.

ಕಂಪನಿಯು ಆರಂಭದಲ್ಲಿ 10 ಲಕ್ಷ ವಾಹನ ವಾರ್ಷಿಕ ಉತ್ಪಾದನಾ ಸಾಮರ್ಥ್ಯದೊಂದಿಗೆ ಪ್ರಾರಂಭಿಸಿ ನಂತರ ಅದನ್ನು ಮೊದಲ ಹಂತದಲ್ಲಿ ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ 20 ಲಕ್ಷಕ್ಕೆ ವಿಸ್ತರಿಸುವುದಾಗಿ ಹೇಳಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...