alex Certify ಅಕ್ಷಮ್ಯ ಪದ ಬಳಸಿದ ಭವಾನಿ ರೇವಣ್ಣ : ಕ್ಷಮೆಯಾಚಿಸಿದ ಪುತ್ರ ಸೂರಜ್ ರೇವಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಷಮ್ಯ ಪದ ಬಳಸಿದ ಭವಾನಿ ರೇವಣ್ಣ : ಕ್ಷಮೆಯಾಚಿಸಿದ ಪುತ್ರ ಸೂರಜ್ ರೇವಣ್ಣ

ಬೆಂಗಳೂರು : ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಸೊಸೆ ಭವಾನಿ ರೇವಣ್ಣ ಅವರ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಇದರಿಂದ ಸಿಟ್ಟಾದ ಭವಾನಿ ರೇವಣ್ಣ ಬೈಕ್ ಸವಾರನಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದರು.

ರೇವಣ್ಣ ಅಕ್ಷಮ್ಯ ಪದಗಳನ್ನು ಬಳಸಿದ್ದಕ್ಕೆ ಪುತ್ರ ಸೂರಜ್ ರೇವಣ್ಣ ಕ್ಷಮೆಯಾಚಿಸಿದ್ದಾರೆ. ಅಪಘಾತದಲ್ಲಿ ಬೈಕ್ ಸವಾರನದ್ದೇ ತಪ್ಪು. ಆತ ಕುಡಿದು ಬೈಕ್ ಓಡಿಸಿದ್ದಾನೆ. ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ, ನನ್ನ ತಾಯಿ ಪರ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ಭಾನುವಾರ ಮೈಸೂರು ಜಿಲ್ಲೆ ಸಾಲಿಗ್ರಾಮ ಸಮೀಪ ಭವಾನಿ ರೇವಣ್ಣ ಅವರು ಪ್ರಯಾಣಿಸುತ್ತಿದ್ದ ಕಾರ್ ಗೆ ಎದುರಿನಿಂದ ಬಂದ ಬೈಕ್ ಸವಾರ ಬಲಭಾಗದಿಂದ ಬಂದು ಡಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ಕಾರ್ ಮುಂಭಾಗಕ್ಕೆ ಹಾನಿಯಾಗಿದೆ. ಇದನ್ನು ಗಮನಿಸಿದ ಭವಾನಿ ರೇವಣ್ಣ ಕಾರ್ ನಿಂದ ಕೆಳಗಿಳಿದು ಬೈಕ್ ಸವಾರನನ್ನು ತರಾಟೆಗೆ ತೆಗೆದುಕೊಂಡಿದ್ದರು.

ಸಾಯೋಕೆ ನನ್ ಗಾಡಿನೆ ಬೇಕಾ..? ಸಾಯೋಕೆ ನನ್ನ ಒಂದೂವರೆ ಕೋಟಿ ಕಾರೇ ಬೇಕಾಗಿತ್ತಾ ಯಾವುದಾದರೂ ಬಸ್ ಗೆ ಹೋಗಿ ಸಾಯಲು ಆಗಲ್ವಾ? ಭವಾನಿ ರೇವಣ್ಣ ಬೈಕ್ ಸವಾರನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಅವರು ಅಕ್ಷಮ್ಯ ಪದಗಳನ್ನು ಬಳಕೆ ಮಾಡಿದ್ದಕ್ಕೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...