ಎಲ್ಲಾ ಬೆಳೆಗಳನ್ನು ಕನಿಷ್ಠ ಬೆಂಬಲ ಕೊಟ್ಟು ಖರೀದಿ ಮಾಡುವುದಾಗಿ ಖಾತ್ರಿ ನೀಡಲು ಆಗ್ರಹಿಸಿ ಆರ್‌ಎಸ್‌ಎಸ್‌ನ ರೈತರ ಸಂಘಟನೆಯಾದ ಭಾರತೀಯ ಕಿಸಾಸ್ ಸಂಘವು ಬುಧವಾರದಂದು ದೇಶಾದ್ಯಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಧರಣಿ ಕೈಗೊಳ್ಳಲಿದೆ.
“ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚಿನ ಬೆಲೆಯನ್ನು ರೈತರು ತಮ್ಮ ಉತ್ಪನ್ನಗಳಿಗೆ ಪಡೆಯುವಂತೆ ಮಾಡಲು ತ್ವರಿತವಾಗಿ ಕಾನೂನನ್ನು ಜಾರಿಗೆ ತರಬೇಕಾದ ಅಗತ್ಯವಿದೆ” ಎಂದು ಬಿಕೆಎಸ್ ಮಹಾ ಕಾರ್ಯದರ್ಶಿ ಬದ್ರಿ ನಾರಾಯಣ ಚೌಧರಿ ತಿಳಿಸಿದ್ದಾರೆ.
ಕೆಂಪು ಬೆಂಡೆಕಾಯಿ ನೋಡಿದ್ದೀರಾ…? ಇಲ್ಲಿದೆ ಅದರ ವಿಶೇಷತೆ
ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದಿರುವುದೇ ರೈತ ಸಮುದಾಯದ ಅತಿ ದೊಡ್ಡ ಹತಾಶೆಗೆ ಕಾರಣವಾಗಿದೆ ಎಂದ ಚೌಧರಿ, ಈ ಸಂಬಂಧ ಆಗಸ್ಟ್ 11ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ.
“ಎಲ್ಲಾ ರಾಜ್ಯಗಳ ರೈತರಿಗೂ ಕನಿಷ್ಠ ಬೆಂಬಲ ಬೆಲೆಯಿಂದ ಲಾಭವಾಗುವಂಥ ವ್ಯವಸ್ಥೆಗಾಗಿ ನಾವೆಲ್ಲಾ ಕೆಲಸ ಮಾಡಬೇಕಿದೆ. ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವಂತೆ ಖಾತ್ರಿ ಪಡಿಸುವ ಕಾನೂನು ನಮ್ಮದಾಗಬೇಕು — ಅದು ಮಂಡಿಯೇ ಆಗಲೀ, ಮಂಡಿಯ ಹೊರಗೆ ಸರ್ಕಾರೀ ಏಜೆನ್ಸಿಗಳು ಅಥವಾ ಖಾಸಗಿ ವರ್ತಕರೇ ಆಗಲಿ” ಎಂದು ಚೌಧರಿ ತಿಳಿಸಿದ್ದಾರೆ.