ನವದೆಹಲಿ: ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಸಿಹಿ ಸುದ್ದಿ ಇಲ್ಲಿದೆ. ಅಕ್ಕಿ ಬೆಲೆ ಏರಿಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಭಾರತ್ ಅಕ್ಕಿ ಯೋಜನೆ ಮಂಗಳವಾರದಿಂದ ಆರಂಭವಾಗಲಿದೆ. ಪ್ರತಿ ಕೆಜಿಗೆ 29 ರೂಪಾಯಿ ದರ ನಿಗದಿ ಪಡಿಸಲಾಗಿದೆ.
ತಲಾ 5 ಕೆಜಿ, 10 ಕೆಜಿ ಬ್ಯಾಗ್ ಗಳಲ್ಲಿ ಅಕ್ಕಿ ಮಾರಾಟ ಮಾಡಲಿದ್ದು, ಪ್ರತಿ ಕೆಜಿಗೆ 29 ರೂ. ದರ ನಿಗದಿಪಡಿಸಲಾಗಿದೆ. ನಾಫೆಡ್, ಎನ್.ಸಿ.ಸಿ.ಎಫ್., ಕೇಂದ್ರೀಯ ಭಂಡಾರಗಳು, ಇ- ಕಾಮರ್ಸ್ ತಾಣಗಳ ಮೂಲಕ ಅಕ್ಕಿ ಮಾರಾಟ ಮಾಡಲಾಗುತ್ತದೆ. ಮೊದಲ ಹಂತದಲ್ಲಿ 5 ಲಕ್ಷ ಟನ್ ಅಕ್ಕಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈಗಾಗಲೇ ಕೇಂದ್ರ ಸರ್ಕಾರ ಭಾರತ್ ಅಟ್ಟಾವನ್ನು ಪ್ರತಿ ಕೆಜಿಗೆ 27.50 ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆಜಿಗೆ 60 ರೂಪಾಯಿ ದರದಲ್ಲಿ ಭಾರತ್ ದಾಲ್ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲಾಗುತ್ತಿದೆ.