ಬೆಂಗಳೂರು: ಲೋಕಸಭೆ ಚುನಾವಣೆಗೂ ಮೊದಲು ಶುರುವಾಗಿದ್ದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ಭಾರತ್ ಅಕ್ಕಿ ಯೋಜನೆ ಜುಲೈನಿಂದ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.
ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಇಲ್ಲದ ಜನಸಾಮಾನ್ಯರಿಗೆ ಅಗ್ಗದ ಪಡಿತರ ಯೋಜನೆಗೆ ಸ್ಥಗಿತಗೊಳಿಸಲಾಗಿದೆ. ಈ ಯೋಜನೆ ಅಡಿ ಕೆಜಿಗೆ 29 ರೂಪಾಯಿಗೆ ಅಕ್ಕಿ, 27.50ರೂ. ಗೆ ಗೋಧಿ ಹಿಟ್ಟು, 60 ರೂಪಾಯಿಗೆ ಕಡ್ಲೆ ಬೇಳೆ ವಿತರಿಸಲಾಗುತ್ತಿತ್ತು. ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ದಿನಸಿ ವಿತರಿಸಲು ಯೋಜನೆ ರೂಪಿಸಲಾಗಿತ್ತು. ಗ್ರಾಹಕರಿಂದಲೂ ಭಾರತ್ ಅಕ್ಕಿಗೆ ಭಾರಿ ಬೇಡಿಕೆ ಇತ್ತು. ಆದರೆ ಯೋಜನೆಯನ್ನು ದಿಢೀರ್ ನಿಲ್ಲಿಸಲಾಗಿದೆ.
ಕೇಂದ್ರದ ಆದೇಶದಂತೆ ಸಾಮಗ್ರಿಗಳನ್ನು ಜೂ.10ರವರೆಗೆ ಸರಬರಾಜು ಮಾಡಲಾಗಿದ್ದು, ನಂತರ ಸಾಮಗ್ರಿ ಪೂರೈಕೆಯಾಗದ ಕಾರಣ ಸದ್ಯಕ್ಕೆ ವಿತರಣೆ ಸ್ಥಗಿತಗೊಂಡಿದೆ. 2024ರ ಫೆಬ್ರವರಿ 2ರಿಂದ ಭಾರತ್ ಅಕ್ಕಿ ಯೋಜನೆ ಆರಂಭಿಸಲಾಗಿತ್ತು. ಅಕ್ಕಿಮ ಗೋಧಿ ತಲಾ 10 ಕೆಜಿ, ಕಡ್ಲೆಬೇಳೆ ಐದು ಕೆಜಿ ಬ್ಯಾಗ್ ಗಳಲ್ಲಿ ನೀಡಲಾಗುತ್ತಿತ್ತು, ಮೊಬೈಲ್ ವ್ಯಾನ್ ಮತ್ತು ಮಾಲ್ ಗಳಲ್ಲಿಯೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಇದ್ದು, ಸದ್ಯಕ್ಕೆ ಯೋಜನೆ ಸ್ಥಗಿತಗೊಳಿಸಲಾಗಿದೆ,