ನವದೆಹಲಿ: ಭಾರತದ ಅತ್ಯುನ್ನತ ನಾಗರಿಕ ಗೌರವ ‘ಭಾರತ ರತ್ನ’ ಪ್ರಶಸ್ತಿಯನ್ನು ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್, ಪಿ.ವಿ. ನರಸಿಂಹರಾವ್ ಮತ್ತು ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಅವರಿಗೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸುವುದರೊಂದಿಗೆ, ಭಾರತ ರತ್ನ ಪ್ರಶಸ್ತಿ ಪಡೆದವರ ಸಂಖ್ಯೆ 53 ಕ್ಕೆ ಏರಿದೆ.
ಕಳೆದ ತಿಂಗಳು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಮತ್ತು ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸಲಾಗಿತ್ತು.
1954 ರಲ್ಲಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ, ಐದು ಮಹಿಳೆಯರು ಈ ಗೌರವವನ್ನು ಪಡೆದಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1971 ರಲ್ಲಿ ಇದನ್ನು ಪಡೆದ ಮೊದಲ ಮಹಿಳೆ. ನಂತರ 1980 ರಲ್ಲಿ ಮದರ್ ತೆರೇಸಾ, 1997 ರಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಅರುಣಾ ಅಸಫ್ ಅಲಿ ಮತ್ತು ಗಾಯಕರಾದ ಎಂ.ಎಸ್. ಸುಬ್ಬಲಕ್ಷ್ಮಿ(1998) ಮತ್ತು ಲತಾ ಮಂಗೇಶ್ಕರ್(2001) ಭಾರತ ರತ್ನ ಪಡೆದವರು.
ಪುರಸ್ಕೃತರಲ್ಲಿ ಆರು ಮಾಜಿ ರಾಷ್ಟ್ರಪತಿಗಳು, ಒಂಬತ್ತು ಮಾಜಿ ಪ್ರಧಾನಿಗಳು ಮತ್ತು ಏಳು ಮಾಜಿ ಮುಖ್ಯಮಂತ್ರಿಗಳು ಸೇರಿದ್ದಾರೆ.
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ವಿಜ್ಞಾನಕ್ಕಾಗಿ ಪ್ರಶಸ್ತಿಯನ್ನು ನೀಡಲಾಯಿತು. ಆರು ಮಂದಿ ಸಮಾಜಸೇವೆಗಾಗಿ, ಏಳು ಕಲೆಗಳಿಗೆ(ಗಾಯಕರು ಸೇರಿದಂತೆ), ಎರಡು ಸಾಹಿತ್ಯ ಮತ್ತು ಶಿಕ್ಷಣಕ್ಕಾಗಿ ಮತ್ತು ತಲಾ ಒಬ್ಬರು ನಾಗರಿಕ ಸೇವೆ, ಕ್ರೀಡೆ ಮತ್ತು ವ್ಯಾಪಾರ ಮತ್ತು ಉದ್ಯಮಕ್ಕಾಗಿ ಪಡೆದಿದ್ದಾರೆ.
ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕಲೆ:
ಡಾ ಭೂಪೇಂದ್ರ ಕುಮಾರ್ ಹಜಾರಿಕಾ, ಪಂಡಿತ್ ಭೀಮಸೇನ್ ಗುರುರಾಜ್ ಜೋಶಿ, ಲತಾ ಮಂಗೇಶ್ಕರ್, ಉಸ್ತಾದ್ ಬಿಸ್ಮಿಲ್ಲಾ ಖಾನ್, ಪಂಡಿತ್ ರವಿಶಂಕರ್, ಎಂಎಸ್ ಸುಬ್ಬಲಕ್ಷ್ಮಿ, ಸತ್ಯಜಿತ್ ರೇ.
ನಾಗರಿಕ ಸೇವೆ:
ಎಂ ವಿಶ್ವೇಶ್ವರಯ್ಯ
ಸಾಹಿತ್ಯ ಮತ್ತು ಶಿಕ್ಷಣ:
ಅಮರ್ತ್ಯ ಸೇನ್, ಡಾ ಭಗವಾನ್ ದಾಸ್
ಸಾರ್ವಜನಿಕ ವ್ಯವಹಾರಗಳು:
ಪ್ರಣಬ್ ಮುಖರ್ಜಿ, ಪಂಡಿತ್ ಮದನ್ ಮೋಹನ್ ಮಾಳವೀಯ, ಅಟಲ್ ಬಿಹಾರಿ ವಾಜಪೇಯಿ, ಜಯಪ್ರಕಾಶ್ ನಾರಾಯಣ್, ಶ್ರೀ ಚಿದಂಬರಂ ಸುಬ್ರಮಣ್ಯಂ, ಗೋಪಿನಾಥ್ ಬೊರ್ಡೊಲೊಯ್, ಗುಲ್ಜಾರಿ ಲಾಲ್ ನಂದಾ, ಅರುಣಾ ಅಸಾಫ್ ಅಲಿ(ಮ.ಪಿ. ಕಲಾಂ ಆಜಾದ್, ಸರ್ದಾರ್ ವಲ್ಲಭಭಾಯಿ ಪಟೇಲ್, ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ, ಡಾ ಬಿಆರ್ ಅಂಬೇಡ್ಕರ್, ಡಾ ನೆಲ್ಸನ್ ಮಂಡೇಲಾ, ಎಂಜಿ ರಾಮಚಂದ್ರನ್, ಕುಮಾರಸ್ವಾಮಿ ಕಾಮರಾಜ್, ವಿ.ವಿ. ಗಿರಿ, ಇಂದಿರಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ಡಾ ಜಾಕೀರ್ ಹುಸೇನ್, ಡಾ ರಾಜೇಂದ್ರ ಪ್ರಸಾದ್, ಬಿಧನ್ ಚಂದ್ರ ರಾಯ್, ಪುರುಷೋತ್ತಮ್ ದಾಸ್ ಟಂಡನ್, ಜಿಬಿ ಪಂತ್, ಜವಾಹರಲಾಲ್ ನೆಹರು, ಎಸ್ ರಾಧಾಕೃಷ್ಣನ್, ಸಿ ರಾಜಗೋಪಾಲಾಚಾರಿ, ಕರ್ಪೂರಿ ಠಾಕೂರ್, ಎಲ್ ಕೆ ಅಡ್ವಾಣಿ, ಪಿ.ವಿ. ನರಸಿಂಹ ರಾವ್, ಚೌಧರಿ ಚರಣ್ ಸಿಂಗ್.
ವಿಜ್ಞಾನ ಮತ್ತು ಇಂಜಿನಿಯರಿಂಗ್:
ಚಿಂತಾಮಣಿ ನಾಗೇಶ ರಾಮಚಂದ್ರ ರಾವ್, ಡಾ ಎಪಿಜೆ ಅಬ್ದುಲ್ ಕಲಾಂ, ಸಿವಿ ರಾಮನ್, ಎಂಎಸ್ ಸ್ವಾಮಿನಾಥನ್.
ಸಮಾಜ ಕಾರ್ಯ:
ನಾನಾಜಿ ದೇಶಮುಖ್, ಖಾನ್ ಅಬ್ದುಲ್ ಗಫಾರ್ ಖಾನ್, ಆಚಾರ್ಯ ವಿನೋಬಾ ಭಾವೆ, ಮದರ್ ತೆರೆಸಾ, ಡಾ ಪಾಂಡುರಂಗ ವಾಮನ್ ಕೇನ್, ಡಾ ಧೋಂಡೋ ಕೇಶವ ಕರ್ವೆ.
ಕ್ರೀಡೆ:
ಸಚಿನ್ ತೆಂಡೂಲ್ಕರ್
ವ್ಯಾಪಾರ ಮತ್ತು ಕೈಗಾರಿಕೆ:
JRD ಟಾಟಾ