ಒಂದು ಹೆಣ್ಣು ಅನುಭವಿಸುವ ನೋವು ಹೊರಜಗತ್ತಿಗೆ ಕಾಣುವುದು ಅಪರೂಪ. ಹೊರಗಡೆ ನಗುವಿನ ಮುಖವಾಡ ಹೊತ್ತು ಒಳಗೆ ಅನುಭವಿಸುತ್ತಿರುವ ಹಿಂಸೆ ಆಕೆಗಷ್ಟೇ ಗೊತ್ತಿರಲು ಸಾಕು. ಹೆಣ್ಣಿನ ಸುರಕ್ಷತೆ ಮುಖ್ಯ ಎಂದು ಸಾರುವ ವಿಡಿಯೋ ಒಂದನ್ನು ಭಾರತ್ ಮ್ಯಾಟ್ರಿಮೋನಿಯಲ್ ವೆಬ್ಸೈಟ್ ರಚಿಸಿದೆ. ಅದೀಗ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಹೋಳಿಯ ಬಣ್ಣಗಳಿಂದ ಮಹಿಳೆ ಮುಖ ನೋಡಬಹುದು. ಆದರೆ ಆಕೆ ಆ ಬಣ್ಣಗಳನ್ನು ತೊಳೆದುಕೊಂಡಾಗ ದೌರ್ಜನ್ಯನಿಂದ ಜರ್ಜರಿತವಾಗಿರುವ ಆಕೆಯ ಮುಖವು ಕಾಣಿಸುತ್ತದೆ. ಹೀಗೆ ಹೆಣ್ಣುಮಕ್ಕಳಿಗೆ ಹಿಂಸೆ ಕೊಡುವುದು ಸರಿಯಲ್ಲ ಎಂಬ ಸಂದೇಶವಿದು.
ಆದರೆ ಮಹಿಳೆಯರ ಹಿಂಸೆಗೆ ಹೋಳಿ ಹಬ್ಬವನ್ನು ತೆಗೆದುಕೊಂಡಿರುವುದು ಕೆಲವು ಹಿಂದೂ ಧರ್ಮಿಯರನ್ನು ಕೆರಳಿಸಿದೆ. ಹಿಂದೂಗಳು ಏನೂ ಹೇಳುವುದಿಲ್ಲ, ಗಲಾಟೆಗೆ ಬರುವುದಿಲ್ಲ ಎನ್ನುವ ಕಾರಣಕ್ಕೆ, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದು ಸರಿಯಲ್ಲ ಎಂದು ಆರೋಪಿಸಿರುವ ಕೆಲವು ಹಿಂದೂಗಳು ಬೈಕಾಟ್ ಭಾರತ್ ಮ್ಯಾಟ್ರಿಮೋನಿ ಅಭಿಯಾನ ಶುರು ಮಾಡಿದ್ದಾರೆ.