Watch Video | ʼಮೋದಿ ಮೋದಿʼ ಎಂಬ ಘೋಷಣೆ ಕೂಗುತ್ತಿದ್ದವರಿಗೆ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್…! 06-12-2022 11:12AM IST / No Comments / Posted In: Latest News, India, Live News ದೇಶದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರೇಕ್ಷಕರ ಕಡೆಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ. ಆದರೆ ಇದರಲ್ಲಿರೋ ವಿಶೇಷತೆಯನ್ನ ನೀವು ತಿಳಿಯಲೇಬೇಕು. ಪ್ರಸ್ತುತ ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೋದಿ, ಮೋದಿ ಎಂಬ ಘೋಷಣೆಗಳಿಗೆ ಫ್ಲೈಯಿಂಗ್ ಕಿಸ್ ನೀಡಿ ಉತ್ತರಿಸುವ ಮೂಲಕ ಪ್ರೇಕ್ಷಕರನ್ನು ಆಶ್ಚರ್ಯಗೊಳಿಸಿದರು. ಮಂಗಳವಾರ ಬೆಳಿಗ್ಗೆ ರಾಹುಲ್ ಗಾಂಧಿ ತಮ್ಮ ಯಾತ್ರೆಯನ್ನು ಆರಂಭಿಸಿ ಜಲಾವರ್ ನ ಬಿಜೆಪಿ ಕಚೇರಿಯ ಮುಂಭಾಗ ಸಾಗುತ್ತಿದ್ದರು. ಆಗ ಬಿಜೆಪಿ ಕಚೇರಿಯ ಮೇಲ್ಛಾವಣಿಯಲ್ಲಿ ಜಮಾಯಿಸಿದ ಜನರು ಮೋದಿ ಮೋದಿ ಎಂದು ಜೋರಾಗಿ ಘೋಷಣೆ ಕೂಗಿದರು. ಈ ವೇಳೆ ಘೋಷಣೆ ಕೂಗುತ್ತಿದ್ದ ಜನರತ್ತ ನೋಡಿದ ರಾಹುಲ್ ಗಾಂಧಿ ಅವರಿಗೆ ಫ್ಲೈಯಿಂಗ್ ಕಿಸ್ ನೀಡಿ ನಗುತ್ತಾ ಇನ್ನೂ ಕೂಗಿ ಎಂಬಂತೆ ಸನ್ನೆ ಮಾಡಿ ಮುಂದೆ ಸಾಗಿದರು. ಈ ವಿಡಿಯೋವನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. @RahulGandhi giving flying kiss to people shouting "Modi! Modi!"to him ☺️ Will Modi react the same way if shouted "Rahul Gandhi! Rahul Gandhi!" to him?? 🤔pic.twitter.com/o5kfAVECHI — Rohini Anand (@mrs_roh08) December 5, 2022