
ಚಾಮರಾಜನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ‘ಭಾರತ್ ಜೋಡೋ ಯಾತ್ರೆ’ ವೇಳೆ ಡ್ರೋನ್ ಗೊಂದಲ ಸೃಷ್ಟಿಸಿದೆ.
ಕಾಂಗ್ರೆಸ್ ನಾಯಕರ ಪಾದಯಾತ್ರೆ ವೇಳೆಯಲ್ಲಿ ಡ್ರೋನ್ ಹಾರಾಟ ನಡೆಸುತ್ತಿತ್ತು. ಪಾದಯಾತ್ರೆ ಸ್ಥಳದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ಡ್ರೋನ್ ಹಾರಾಟ ನಡೆಸಿದ್ದು, ಎಐಸಿಸಿಯಿಂದ ಅನುಮತಿ ಪಡೆದ ದ್ರೋನ್ ಮಾತ್ರ ಹಾರಾಟ ನಡೆಸುತ್ತಿತ್ತು. ಆದರೆ ಸಂಜೆಯ ವೇಳೆಗೆ ಹೊಸ ಡ್ರೋನ್ ಹಾರಾಟದಿಂದ ಗೊಂದಲ ಸೃಷ್ಟಿಯಾಗಿದೆ.
ಡ್ರೋನ್ ಹಾರಾಟ ಕಂಡ ಸೆಕ್ಯೂರಿಟಿ ಸಿಬ್ಬಂದಿ ಕೂಡಲೇ ಅಲರ್ಟ್ ಆಗಿದ್ದಾರೆ. ಎರಡು, ಮೂರು ಸಲ ವಾರ್ನ್ ಮಾಡಿದರೂ ಡ್ರೋನ್ ಹಾರಾಟ ನಿಂತಿರಲಿಲ್ಲ. ಕೊನೆಗೆ ಡ್ರೋನ್ ಹಾರಿಸುತ್ತಿದ್ದವರನ್ನು ಭದ್ರತಾ ಸಿಬ್ಬಂದಿ ಪತ್ತೆ ಮಾಡಿದ್ದು, ಅದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತರಿಗೆ ಸೇರಿದ್ದು ಎಂಬುದು ಗೊತ್ತಾಗಿದೆ. ಅವರಿಗೆ ಡ್ರೋನ್ ಹಾರಿಸದಂತೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.