ಹಾಸನ: ರಿಪಬ್ಲಿಕ್ ಆಫ್ ಭಾರತ್ ಎಂದು ಮರುನಾಮಕರಣ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ತಲೆಕೆಡಿಸಿಕೊಳ್ಳದೆ ನಿರ್ಲಕ್ಷ್ಯ ಮಾಡಬೇಕು ಎಂದು ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಭಾರತ ಎಂದರೆ ಇಂಡಿಯಾ ಎಂದು ಸಣ್ಣ ಮಕ್ಕಳಿಗೂ ಗೊತ್ತು. ಇಂಡಿಯಾ, ಭಾರತ ಎರಡೂ ಒಂದೇ ತಾನೇ? ನಮ್ಮ ರಾಜಕೀಯಕ್ಕಾಗಿ ನಾವು ಏಕೆ ಬೇರೆ ಬೇರೆ ಮಾಡಬೇಕು ಎಂದು ಪರೋಕ್ಷವಾಗಿ ಕೇಂದ್ರದ ಕಡೆಗೆ ಖಾದರ್ ಬೇಸರ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಭಾರತರತ್ನ ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಭಾರತ್ ಎಲೆಕ್ಟ್ರಿಕಲ್ ಲಿಮಿಟೆಡ್, ಭಾರತ್ ಮೋಟರ್ಸ್ ಇವೆ. ಈಗಿನ ಸರ್ಕಾರ ಖೇಲೋ ಇಂಡಿಯಾ, ಡಿಜಿಟಲ್ ಇಂಡಿಯಾ ಎಂದು ಹೆಸರಿಟ್ಟಿದೆ. ರಾಜಕೀಯಕ್ಕಾಗಿ ನಾವು ಭಾರತ, ಇಂಡಿಯಾ ಬೇರ್ಪಡಿಸುವ ಪ್ರಯತ್ನ ಮಾಡಬಾರದು. ಭಾರತ, ಇಂಡಿಯಾ ಎರಡೂ ಒಂದೇ. ನಾವೆಲ್ಲ ಒಂದಾಗಿರಬೇಕು ಎಂದು ಹೇಳಿದ್ದಾರೆ.