15-18 ವಯಸ್ಸಿನ ಮಕ್ಕಳಿಗೆ ಕೋವ್ಯಾಕ್ಸಿನ್ ಅಲ್ಲದೆ ಇನ್ನಿತರ ಕೋವಿಡ್ ಲಸಿಕೆಗಳನ್ನ ನೀಡಲಾಗ್ತಿದೆ ಎಂದು ವರದಿಯಾಗಿದೆ ಎಂದು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ತಿಳಿಸಿದೆ. ಈ ನಿರ್ದಿಷ್ಟ ಜನಸಂಖ್ಯೆಯ ವರ್ಗಕ್ಕೆ ಕೋವಾಕ್ಸಿನ್ ಮಾತ್ರ ಅನುಮೋದಿತ ಕೋವಿಡ್ ಲಸಿಕೆಯಾಗಿರುವುದರಿಂದ, ಮಕ್ಕಳಿಗೆ ಲಸಿಕೆ ನೀಡುವಾಗ ಕೋವ್ಯಾಕ್ಸಿನ್ ಅಷ್ಟೇ ನೀಡುತ್ತಿದ್ದೇವೆ ಎಂದು ಖಚಿತಪಡಿಸಿಕೊಳ್ಳಿ ಎಂದು ಭಾರತ್ ಬಯೋಟೆಕ್ ಆರೋಗ್ಯ ಕಾರ್ಯಕರ್ತರಿಗೆ ಮನವಿ ಮಾಡಿದೆ.
15-18 ವರ್ಷ ವಯಸ್ಸಿನ ವರ್ಗದವರಿಗೆ ಇತರ ಕೋವಿಡ್ ಲಸಿಕೆಗಳನ್ನು ನೀಡಲಾಗುತ್ತಿದೆ ಎಂಬ ಹಲವಾರು ವರದಿಗಳನ್ನು ನಾವು ಸ್ವೀಕರಿಸಿದ್ದೇವೆ. ಸಂಪೂರ್ಣ ಕ್ಲಿನಿಕಲ್ ಪ್ರಯೋಗದ ಮೌಲ್ಯಮಾಪನದ ಆಧಾರದ ಮೇಲೆ, 2-18 ವರ್ಷ ವಯಸ್ಸಿನವರಿಗೆ ಸುರಕ್ಷತೆ ಮತ್ತು ರೋಗನಿರೋಧಕ ಶಕ್ತಿ ಒದಗಿಸುವ ಲಸಿಕೆ, ಕೋವ್ಯಾಕ್ಸಿನ್ ಎಂದು ಅನುಮೋದನೆ ಪಡೆದಿದೆ.
ಪ್ರಸ್ತುತ, ಇದು ಭಾರತದಲ್ಲಿ ಮಕ್ಕಳಿಗಾಗಿ ಅನುಮೋದಿಸಲಾದ ಏಕೈಕ ಕೊರೋನಾ ಲಸಿಕೆಯಾಗಿದೆ. ಹೀಗಾಗಿ ಆರೋಗ್ಯ ಕಾರ್ಯಕರ್ತರು ಹೆಚ್ಚು ಜಾಗರೂಕತೆ ವಹಿಸಿ, 15-18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಾಕ್ಸಿನ್ ಮಾತ್ರ ನೀಡಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ವಿನಂತಿಸುತ್ತೇವೆ ”ಎಂದು ಭಾರತ್ ಬಯೋಟೆಕ್ ಇತ್ತೀಚಿನ ಪ್ರಕಟಣೆಯಲ್ಲಿ ತಿಳಿಸಿದೆ.
ಜನವರಿ 3, 2022 ರಿಂದ 15 ಮತ್ತು 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಈ ವರ್ಗಕ್ಕೆ ಕೋವ್ಯಾಕ್ಸಿನ್ ಮಾತ್ರ ನೀಡಿ ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ ಪ್ರಮಾಣವನ್ನ ಕಳುಹಿಸುತ್ತಿದೆ.