ಡಿ. 31ರೊಳಗೆ ಕೊರೊನಾವನ್ನು ದೇಶದಲ್ಲಿ ಪೂರ್ಣವಾಗಿ ನಿಯಂತ್ರಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರವು ಒಟ್ಟಾರೆ 94 ಕೋಟಿ ಅರ್ಹ ಪ್ರಜೆಗಳಿಗೆ ಲಸಿಕೆಯ ಎರಡೂ ಡೋಸ್ ನೀಡುವ ಗುರಿ ಹೊಂದಿದೆ.
ಆದರೆ ದೇಶೀಯ ಕೊರೊನಾ ಲಸಿಕೆ ಖ್ಯಾತಿಯ ’ಕೊವ್ಯಾಕ್ಸಿನ್’ ಲಭ್ಯತೆ ಮಾತ್ರ ದೇಶಾದ್ಯಂತ ಕುಂಟುತ್ತಲೇ ಸಾಗುತ್ತಿದೆ. 11 ಜನರ 1 ವ್ಯಕ್ತಿಗೆ ಮಾತ್ರವೇ ಕೊವ್ಯಾಕ್ಸಿನ್ ಲಸಿಕೆ ದೊರೆಯುತ್ತಿದೆ. ಇದಕ್ಕೆ ಪ್ರಮುಖ ಕಾರಣ ಲಸಿಕೆಯ ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಹಾಗಾಗಿ ಕೊವ್ಯಾಕ್ಸಿನ್ ಲಸಿಕೆಯು ಅಗತ್ಯ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ.
ಕಳೆದ ಮೇ ತಿಂಗಳ ಗುರಿಯಂತೆ ಕೇಂದ್ರ ಸರ್ಕಾರವು 55 ಕೋಟಿ ಡೋಸ್ ಕೊವ್ಯಾಕ್ಸಿನ್ ಉತ್ಪಾದನೆ ನಿರೀಕ್ಷೆ ಇಟ್ಟುಕೊಂಡಿತ್ತು. ಅಂದರೆ ಮಾಸಿಕ 10 ಕೋಟಿ ಡೋಸ್‌ಗಳ ಉತ್ಪಾದನೆ ಆಗಬೇಕಿತ್ತು. ಆದರೆ ಆಗಿದ್ದು 8 ಕೋಟಿ ಡೋಸ್ ಉತ್ಪಾದನೆ ಮಾತ್ರವೇ.
ಅಕ್ಟೋಬರ್ ಅಂತ್ಯಕ್ಕೆ 5.5 ಕೋಟಿ ಕೊವ್ಯಾಕ್ಸಿನ್ ಲಸಿಕೆ ತಯಾರಿಸಿ ಪೂರೈಕೆ ಮಾಡಲು ಸಾಧ್ಯ ಎಂದು ಕಂಪನಿಯು ಸರ್ಕಾರಕ್ಕೆ ಹೇಳಿದೆ ಎನ್ನಲಾಗಿದೆ.
ಟಿ-20 ವಿಶ್ವಕಪ್ ಗೆ ಧೋನಿ ಮಾರ್ಗದರ್ಶಕರಾಗಿದ್ದೇಕೆ…..? ರಹಸ್ಯ ಬಿಚ್ಚಿಟ್ಟ ಬಿಸಿಸಿಐ
ಅಲ್ಲಿಗೆ, ಮಾಸಿಕ 2 ಕೋಟಿ ಡೋಸ್‌ಗಳ ಕೊರತೆಯ ಜತೆಗೆ ಒಟ್ಟಾರೆ 3.5 ಕೋಟಿ ಡೋಸ್ ಕಡಿಮೆ ಲಸಿಕೆಯನ್ನು ಸರ್ಕಾರಕ್ಕೆ ಕಂಪನಿ ನೀಡುತ್ತಿದೆ. ಇದರ ಪರಿಣಾಮ ಜನರಿಗೆ ಕೊವ್ಯಾಕ್ಸಿನ್ ಕೊರತೆ ಎದುರಾಗಲಿದೆ. ಅನಿವಾರ್ಯವಾಗಿ ’ಕೋವಿಶೀಲ್ಡ್’ ಲಸಿಕೆಯನ್ನೇ ಜನರು ಅವಲಂಬಿಸಬೇಕಾಗುತ್ತದೆ. ಒಂದು ಬ್ಯಾಚ್ ಲಸಿಕೆಯು ಉತ್ಪಾದನೆ, ತಪಾಸಣೆ ವ್ಯವಸ್ಥೆಗಳಿಗೆ ಒಳಪಟ್ಟು ಕಂಪನಿಯ ತಯಾರಿಕೆ ಘಟಕದಿಂದ ಹೊರಬರಬೇಕಾದರೆ 120 ದಿನಗಳು ಆಗುತ್ತವೆಯಂತೆ.