ನವದೆಹಲಿ: ಮೂಗಿನಲ್ಲಿ ಹಾಕುವ ಕೊವ್ಯಾಕ್ಸಿನ್ ಲಸಿಕೆ ಸಿದ್ಧವಾಗಿದ್ದು, ಭಾರತ್ ಬಯೋಟೆಕ್ ಕಂಪನಿ ಒಪ್ಪಿಗೆಗೆ ಅರ್ಜಿ ಸಲ್ಲಿಸಿದೆ.
ಭಾರತ್ ಬಯೋಟೆಕ್ ಕಂಪನಿ ತಯಾರಿಸಿದ ಮೂಗಿನಲ್ಲಿ ಹಾಕುವ ಕರೋನಾ ಲಸಿಕೆಯ ಮೂರನೇ ಹಂತದ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಮೂರನೇ ಹಂತದ ಪರೀಕ್ಷೆ ಪೂರ್ಣಗೊಂಡಿದ್ದು ಉತ್ತಮ ಫಲಿತಾಂಶ ಕಂಡುಬಂದಿದೆ. ದತ್ತಾಂಶವನ್ನು ರಾಷ್ಟ್ರೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಸಲ್ಲಿಸಿ ಅನುಮತಿ ಕೋರಲಾಗಿದೆ ಎಂದು ಭಾರತ್ ಬಯೋಟೆಕ್ ಕಂಪನಿ ತಿಳಿಸಿದೆ.