alex Certify ಭಾರತ್‌ ಬಂದ್: ಕಿಸಾನ್ ಮೋರ್ಚಾ ಬೆಂಬಲಕ್ಕೆ ನಿಂತ ಕಾಂಗ್ರೆಸ್‌, ಟಿಡಿಪಿ ಮತ್ತು ಎಡರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತ್‌ ಬಂದ್: ಕಿಸಾನ್ ಮೋರ್ಚಾ ಬೆಂಬಲಕ್ಕೆ ನಿಂತ ಕಾಂಗ್ರೆಸ್‌, ಟಿಡಿಪಿ ಮತ್ತು ಎಡರಂಗ

ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾನೂನುಗಳನ್ನು ವಿರೋಧಿಸಿ ಸೆಪ್ಟೆಂಬರ್‌ 27ರಂದು ದೇಶಾದ್ಯಂತ ಬಂದ್‌ಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.

ಭಾರತ್‌ ಬಂದ್‌ ಅನ್ನು ಇನ್ನಷ್ಟು ಯಶಸ್ವಿಗೊಳಿಸಲು ಎಡ ಪಕ್ಷಗಳು, ಕಾಂಗ್ರೆಸ್ ಮತ್ತು ತೆಲುಗು ದೇಶಂ, ಸಿಪಿಐನ ಆಂಧ್ರ ಪ್ರದೇಶದ ಕಚೇರಿಯಲ್ಲಿ ಬುಧವಾರ ಸಭೆ ಸೇರಿದ್ದವು.

“ದೆಹಲಿಯಲ್ಲಿ ಒಂಬತ್ತು ತಿಂಗಳುಗಳಿಂದ ಪ್ರತಿಭಟನೆ ಮಾಡುತ್ತಿರುವ ರೈತರಿಗೆ ಬೆಂಬಲ ನೀಡಲು ಭಾರತ್‌ ಬಂದ್ ಹಮ್ಮಿಕೊಂಡಿದ್ದೇವೆ. ಕೇಂದ್ರದ ಮೂರು ಕರಾಳ ಕಾನೂನುಗಳು ರೈತರನ್ನು ಸಂಕಷ್ಟಕ್ಕೆ ತಳ್ಳಿವೆ,” ಎಂದು ಸಿಪಿಐನ ರಾಜ್ಯ ನಾಯಕ ದೊನೆಪುಡಿ ಶಂಕರ್‌ ತಿಳಿಸಿದ್ದಾರೆ.

Good News:12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಶೀಘ್ರವೇ ಸಿಗಲಿದೆ ಕೊರೊನಾ ಲಸಿಕೆ

“ರಾಷ್ಟ್ರೀಯ ನಿಧಿ ಕ್ರೋಢೀಕರಣದ ಹೆಸರಿನಲ್ಲಿ ಕೇಂದ್ರ ಸರ್ಕಾರವು ರೈಲ್ವೇ ನಿಲ್ದಾಣಗಳು, ರೈಲ್ವೇ ಮಾರ್ಗಗಳು, ಟೆಲಿಕಾಂ, ತೈಲ, ಅನಿಲ, ವಿಮೆ, ಬ್ಯಾಂಕುಗಳು, ವಿಮಾನ ನಿಲ್ದಾಣಗಳು ಹಾಗೂ ಬಂದರಗಳನ್ನೆಲ್ಲಾ ಮಾರಾಟ ಮಾಡುತ್ತಿದೆ. 75 ಲಕ್ಷ ಕೋಟಿ ರೂಪಾಯಿ ಮೌಲ್ಯದಷ್ಟಿರುವ ಸಾರ್ವಜನಿಕ ಆಸ್ತಿಯನ್ನು ಕೇಂದ್ರ ಸರ್ಕಾರ ಮಾರಲು ಮುಂದೆ ಬಂದಿದೆ. ವಿಶಾಖಪಟ್ಟಣ ಉಕ್ಕು ಘಟಕವನ್ನು ನಷ್ಟದಲ್ಲಿ ಮಾರಲು ಕೇಂದ್ರ ಮುಂದಾಗಿದೆ,” ಎಂದ ಶಂಕರ್‌‌, “ಪೆಟ್ರೋಲ್, ಡೀಸೆಲ್, ಅನಿಲ ಹಾಗೂ ಇತರೆ ಅತ್ಯಗತ್ಯ ವಸ್ತುಗಳ ಬೆಲೆಗಳು ಸಹ ಏರಿವೆ,” ಎಂದು ಕೇಂದ್ರದ ಮೇಲೆ ಆರೋಪ ಮಾಡಿದ್ದಾರೆ.

ರಾಜಕೀಯ ಪಕ್ಷಗಳು, ವ್ಯಾಪಾರ ಸಂಘಟನೆಗಳು, ರೈತರ ಸಂಘಟನೆಗಳು, ಯುವಕರು, ಶಿಕ್ಷಕರು, ನೌಕರರು ಹಾಗೂ ಇತರರೆಲ್ಲಾ ಸೇರಿ ಸುಮಾರು 100ರಷ್ಟು ಸಂಘಟನೆಗಳು ಸಂಯುಕ್ತ ಕಿಸಾನ್ ಮೋರ್ಚಾ ಕರೆದಿರುವ ಪ್ರತಿಭಟನೆಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...