ಕಳೆದ ವರ್ಷ ನವೆಂಬರ್ 15 ರಂದು ತೆರೆಕಂಡಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಭೈರತಿ ರಣಗಲ್’ ಭರ್ಜರಿ ಯಶಸ್ಸು ಕಂಡಿದ್ದು, ಬಾಕ್ಸ್ ಆಫೀಸ್ ನಲ್ಲೂ ಒಳ್ಳೆಯ ಗಳಿಕೆ ಮಾಡಿದೆ. ಈ ಚಿತ್ರ ಈಗಾಗಲೇ ಅಮೆಜಾನ್ ಪ್ರೈಮ್ ನಲ್ಲಿ ಬಂದಿದ್ದು ದಾಖಲೆ ಮುಟ್ಟದ ವೀಕ್ಷಣೆ ಪಡೆದುಕೊಂಡಿದೆ. ಇದೀಗ ‘ಭೈರತಿ ರಣಗಲ್’ 50 ದಿನಗಳನ್ನು ಪೂರೈಸಿದ್ದು, ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಈ ಚಿತ್ರವನ್ನು ಗೀತಾ ಪಿಕ್ಚರ್ ಬ್ಯಾನರ್ ನಲ್ಲಿ ಗೀತಾ ಶಿವರಾಜ್ ಕುಮಾರ್ ನಿರ್ಮಾಣ ಮಾಡಿದ್ದು, ಶಿವರಾಜ್ ಕುಮಾರ್ ಸೇರಿದಂತೆ ರುಕ್ಮಿಣಿ ವಸಂತ್, ದೇವರಾಜ್, ಅವಿನಾಶ್, ಛಾಯಾ ಸಿಂಗ್, ಶಬೀರ್ ಕಲ್ಲರಕ್ಕಲ್, ಮಧು ಗುರುಸ್ವಾಮಿ, ರಾಹುಲ್ ಬೋಸ್, ತೆರೆ ಹಂಚಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜನೆ ನೀಡಿದ್ದು, ಆಕಾಶ ಹಿರೇಮಠ ಅವರ ಸಂಕಲನ ಹಾಗೂ ಐ.ನವೀನ್ ಕುಮಾರ್ ಛಾಯಾಗ್ರಹಣವಿದೆ.