
ನಂದಮೂರಿ ಬಾಲಕೃಷ್ಣ ಅಭಿನಯದ ಬಹು ನಿರೀಕ್ಷಿತ ‘ಭಗವಂತ ಕೇಸರಿ’ ಸಿನಿಮಾ ಇಂದು ಬಿಡುಗಡೆಯಾಗಿದ್ದು, ಸಿನಿ ಪ್ರೇಕ್ಷಕರು ಭರ್ಜರಿ ರೆಸ್ಪಾನ್ಸ್ ನೀಡುತ್ತಿದ್ದಾರೆ.
ಅನಿಲ್ ರವಿ ಪುಡಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಶೈನ್ ಸ್ಕ್ರೀನ್ ಬ್ಯಾನರ್ ನಲ್ಲಿ ಸಾಹು ಗರಪತಿ ಮತ್ತು ಹರೀಶ್ ನಿರ್ಮಾಣ ಮಾಡಿದ್ದಾರೆ. ಟಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ತಮನ್ ಎಸ್ ಸಂಗೀತ ಸಂಯೋಜನೆ ನೀಡಿದ್ದಾರೆ.
ಈ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಸೇರಿದಂತೆ ಕಾಜಲ್ ಅಗರ್ವಾಲ್, ಶ್ರೀ ಲೀಲಾ, ಅರ್ಜುನ್ ರಾಂಪಾಲ್, ಪ್ರಿಯಾಂಕ ಜಾವಲ್ಕರ್, ಜಾನ್ ವಿಜಯ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ತಮ್ಮಿ ರಾಜು ಸಂಕಲನವಿದೆ. ಇದೊಂದು ಆಕ್ಷನ್ ಕಾಮಿಡಿ ಡ್ರಾಮಾ ಕಥಾ ಹಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ.