ನವದೆಹಲಿ: ಕೇಂದ್ರ ಸಚಿವ ಭಗವಂತ್ ಖೂಬಾ ವಿರುದ್ಧ ಗಂಭೀರ ಆರೋಪ ಮಾಡಿದ್ದ ಮಾಜಿ ಸಚಿ ಸಚಿವ ಪ್ರಭು ಚೌಹಾಣ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಖೂಬಾ ತಿಳಿಸಿದ್ದಾರೆ.
ಪ್ರಭು ಚೌಹಾಣ್ ಆರೊಪ ಸುಳ್ಳು ಹಾಗೂ ಕಪಟದಿಂದ ಕೂದಿದೆ. ಅವರ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧರಿಸಿದ್ದೇನೆ ಎಂದು ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಭಗವಂತ ಖುಬಾ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ. ರಸ್ತೆಮಧ್ಯೆ ಗುಂಡಿಟ್ಟು ಕೊಲ್ಲುವ ಬಗ್ಗೆ ಸಂಚು ರೂಪಿಸಿದ್ದು, ನನ್ನ ಕೊಂದು ಉಪಚುನವಣೆ ಎದುರಿಸುವ ಬಗ್ಗೆಯೂ ಪ್ಲಾನ್ ಮಾಡಿದ್ದಾರೆ ಎಂದು ಪ್ರಭು ಚೌಹಾಣ್ ಆರೋಪಿಸಿದ್ದರು.
ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಖೂಬಾ, ಮಂಡಲದ ಕಾರ್ಯಕಾರಿಣಿಯಲ್ಲಿ ಮಾತನಾಡುವ ಎಲ್ಲಾ ಮಾತು ಬಿಟ್ಟು ನನ್ನ ವಿರುದ್ಧ ಸಾರ್ವಜನಿಕವಾಗಿ ಆರೋಪ ಮಾಡಿದ್ದಾರೆ. ಇದರಿಂದ ನನಗೆ ಆಘಾತವಾಗಿದೆ. ಹೇಳಿಕೊಳ್ಳಲಾಗದಷ್ಟು ಮನಸ್ಸಿಗೆ ನೋವಾಗಿದೆ. ನನ್ನ ಕುಟುಂಬವೂ ಈ ವಿಚಾರ ಕೇಳಿ ವಿಚಲಿತವಾಗಿದೆ. ಪಕ್ಷದ ಕಾರಕರ್ತರು, ಬೆಂಬಲಿಗರು ಕರೆ ಮಾಡಿ ಧೈರ್ಯ ತುಂಬುತ್ತಿದ್ದಾರೆ.
9 ವರ್ಷಗಳ ಹಿಂದೆಯೂ ಪ್ರಭು ಚೌಹಾಣ್ ನನ್ನ ವಿರುದ್ಧ ಇದೇ ರೀತಿ ಆರೋಪ ಮಾಡಿದ್ದರು. ತಪ್ಪು ತಿಳಿವಳಿಕೆ ಸರಿಯಾಗುತ್ತದೆ ಎಂದು ಭಾವಿಸಿದ್ದೆ. ಆದರೆ ಇದರ ಹಿಂದೆ ಮೋಸ, ಕಪಟ ಅಡಗಿದೆ ಎಂಬುದು ಅರ್ಥವಾಗುತ್ತಿದೆ. ನನ್ನ ನೋವನ್ನು ವರಿಷ್ಠರಿಗೂ ತಿಳಿಸಿದ್ದೇನೆ. ಪ್ರಭು ಚೌಹಾಣ್ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ಹಾಕಲು ತೀರ್ಮಾನಿಸಿದ್ದೇನೆ. ವರಿಷ್ಠರು ಅನುಮತಿ ಕೊಟ್ಟರೆ ಕೇಸ್ ದಾಖಲಿಸುತ್ತೇನೆ ಎಂದು ಹೇಳಿದ್ದಾರೆ.