
ಬೀದರ್: ಬೀದರ್ ಸಂಸದ ಭಗವಂತ ಖೂಬಾ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಅವರ ನಿವಾಸದ ಬಳಿ ಸಂಭ್ರಮಾಚರಣೆ ನಡೆದಿದೆ.
ಭಗವಂತ ಖೂಬಾ ಅವರ ನಿವಾಸದ ಬಳಿ ಕುಟುಂಬದವರು, ಬಂಧು, ಬಾಂಧವರು, ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಭಗವಂತ ಖೂಬಾ ಕೇಂದ್ರ ಸಚಿವರಾಗಲಿರುವ ಹಿನ್ನಲೆಯಲ್ಲಿ ಈ ಭಾಗದ ಮತ್ತಷ್ಟು ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಮುಖಂಡರು ಹೇಳಿದ್ದಾರೆ.