ಮೈಸೂರು: ನಂಜನಗೂಡಿನ ಹುಚ್ಚಗಣಿ ಮಹದೇವಮ್ಮ ದೇಗುಲ ತೆರವಿಗೆ ತೀವ್ರ ಆಕ್ರೋಶ ವ್ಯಕ್ತವಾಗಿರುವ ನಡುವೆಯೇ ಇದೀಗ ಪುರಾಣ ಪ್ರಸಿದ್ಧ ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಭದ್ರಕಾಳಿ ಮೂರ್ತಿ ನಾಪತ್ತೆಯಾಗಿರುವುದು ಭಕ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ.
ದೇವಾಲಯದ ವೀರಭದ್ರ ಮೂರ್ತಿಯ ಪಕ್ಕದಲ್ಲಿದ್ದ ಭದ್ರಕಾಳಿ ವಿಗ್ರಹವನ್ನು ಯಾವುದೇ ಸುಳಿವು ನೀಡದೇ ಸ್ಥಳಾಂತರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇನ್ ಸ್ಟಾಗ್ರಾಂ ನಲ್ಲಿ ಸಕ್ರಿಯಳಾಗಿದ್ದ ಯುವತಿ ನಿಗೂಢವಾಗಿ ನಾಪತ್ತೆ
ಪ್ರತಿದಿನ ಪೂಜೆ ಪುನಸ್ಕಾರವನ್ನು ಸಲ್ಲಿಸಲಾಗುತ್ತಿದ್ದ ಮೂರ್ತಿಯನ್ನು ಇದೀಗ ಏಕಾಏಕಿ ಸ್ಥಳಾಂತರ ಮಾಡಲು ಕಾರಣವೇನು ಎಂಬುದು ಚರ್ಚೆಗೆ ಗ್ರಾಸವಾಗಿದೆ. ಶಿವನ ಅವತಾರ ಮೂರ್ತಿಗಳಲ್ಲಿ ಒಂದಾದ ವೀರಭದ್ರೇಶ್ವರ ಮೂರ್ತಿ ಜೊತೆಯಲ್ಲಿ ಭದ್ರಕಾಳಿ ಮೂರ್ತಿ ವಿಗ್ರಹವಿತ್ತು. ಆದರೆ ದೇವಾಲಯ ನಿರ್ಮಾಣ ಕಾಲದಿಂದಲೂ ಇದ್ದ ಮೂರ್ತಿ ಇದೀಗ ದಿಢೀರ್ ಇಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.