
ಶಿವಮೊಗ್ಗ: ಭದ್ರಾ ಕಾಲುವೆಯಲ್ಲಿ ಈಜಲು ಹೋಗಿ ಅಕ್ಕ-ತಮ್ಮ ನೀರು ಪಾಲಾದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಆಗರದಹಳ್ಳಿ ಸಮೀಪ ನಡೆದಿದೆ.
ಅಕ್ಕ ಚಂದು(15), ತಮ್ಮ ಹರ್ಷ(11) ನೀರುಪಾಲಾದವರು ಎಂದು ಹೇಳಲಾಗಿದೆ. ಕಾಲುವೆಯಲ್ಲಿ ಈಜಲು ನೀರಿಗಿಳಿದಾಗ ಅವಘಡ ಸಂಭವಿಸಿದೆ. ಅಗ್ನಿಶಾಮಕದಳದ ಸಿಬ್ಬಂದಿ ಮೃತದೇಹಗಳಿಗಾಗಿ ಶೋಧಕಾರ್ಯ ಕೈಗೊಂಡಿದ್ದಾರೆ ಎನ್ನಲಾಗಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.