ಭಾರತೀಯ ಮದುವೆಗಳೆಂದರೆ ಅಲ್ಲಿ ಹತ್ತಾರು ಬಗೆಯ ಆಚರಣೆಗಳು, ಸಂಭ್ರಮ ಮನೆ ಮಾಡಿರುತ್ತದೆ. ಈ ಸಂಭ್ರಮಾಚರಣೆಯಲ್ಲಿ ಬಂಧು ಬಳಗದವರೆಲ್ಲಾ ಒಟ್ಟಾಗಿ ಸೇರಿ ಭಾಗಿಯಾಗುತ್ತಾರೆ. ವಧು-ವರರು ಈ ಆಚರಣೆಗಳಲ್ಲಿ ಬಿಡುವಿಲ್ಲದಂತೆ ಪಾಲ್ಗೊಳ್ಳುತ್ತಾರೆ.
ಇಂತಹ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಪುರೋಹಿತರೊಬ್ಬರು ವಿನೋದದ ಪ್ರಕರಣಕ್ಕೆ ಸಾಕ್ಷಿಯಾಗಿದ್ದಾರೆ.
ಅದೆಂದರೆ, ಮದುವೆ ಆಚರಣೆಗಳಲ್ಲಿ ತೊಡಗಿದ್ದ ವಧು-ವರನಿಗೆ ಬೆಳಗಿನ ಜಾವ 3 ಗಂಟೆಗೆ ಓಡುವಂತೆ ಸೂಚಿಸಿದ್ದಾರೆ. ಎಲ್ಲರೂ ನಿಬ್ಬೆರಗಾಗಿ ನೋಡುತ್ತಿದ್ದಾಗ, ಓಡುವುದೂ ಸಹ ಮದುವೆ ಆಚರಣೆ ಭಾಗವಾಗಿದೆ ಎಂದು ಪುರೋಹಿತರು ತಿಳಿಸಿದ್ದಾರೆ.
ಮುಖದ ಕಾಂತಿ ಹೆಚ್ಚಿಸುತ್ತೆ ಈ ʼಜ್ಯೂಸ್ʼ
ಈ ವಿಡಿಯೋವನ್ನು ಗೌರಿ ಎಂಬವರ ಇನ್ ಸ್ಟಾಗ್ರಾಂನಲ್ಲಿ ಭಾರೀ ವೈರಲ್ ಆಗಿದ್ದು, ಪುರೋಹಿತರ ಕ್ರಮದ ಬಗ್ಗೆ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಆಕರ್ಷಕ ರೆಡ್ ಲೆಹಂಗಾ ಧರಿಸಿದ ವಧು ಮತ್ತು ಶೆರ್ವಾನಿ ಧರಿಸಿದ ವರರಿಗೆ ಪುರೋಹಿತರು ಮಂತ್ರ ಹೇಳಿಕೊಡುತ್ತಿದ್ದರು. ಇದ್ದಕ್ಕಿದ್ದಂತೆಯೇ ಮಂತ್ರ ಹೇಳಿಕೊಡುವುದನ್ನು ನಿಲ್ಲಿಸಿದ ಪುರೋಹಿತರು, “Bhaglo beta bhaglo” ಎಂದು ಇಬ್ಬರಿಗೂ ಸೂಚಿಸಿದರು.
ಇದನ್ನು ಕಂಡ ಎಲ್ಲರೂ ಆಶ್ಚರ್ಯಚಕಿತರಾಗಿ ನೋಡುತ್ತಿದ್ದರೆ, ಇದೂ ಕೂಡ ಮದುವೆಯ ಭಾಗ ಎಂದು ಹೇಳುವ ಮೂಲಕ ಪುರೋಹಿತರು ಮತ್ತಷ್ಟು ಆಶ್ಚರ್ಯಪಡಿಸಿದರು.
ಈ ವಿಚಿತ್ರ ಆಚರಣೆಯ ವಿಡಿಯೋವನ್ನು ವೀಕ್ಷಿಸಿದ ನೆಟ್ಟಿಗರು, ಬಾಯಿ ಮೇಲೆ ಬೆರಳಿಟ್ಟಿದ್ದರೆ, ಮತ್ತೆ ಕೆಲವರು ಪುರೋಹಿತರ ಅನಾಗರಿಕ ವರ್ತನೆ ಇದು ಎಂದು ಹೀಗಳೆದಿದ್ದಾರೆ.