ಬಿಎಚ್ ಸರಣಿ ಅಥವಾ ಭಾರತ್ ಸರಣಿಯು 28ನೇ ಆಗಸ್ಟ್ 2021 ರಂದು ಭಾರತದಲ್ಲಿ ಪರಿಚಯಿಸಲಾದ ಸಾರಿಗೆಯೇತರ ವಾಹನಗಳ ನಂಬರ್ ಪ್ಲೇಟ್‌ಗಳ ಸರಣಿಯಾಗಿದೆ.
ಮೇಲ್ಕಂಡ ಸರಣಿಯಲ್ಲಿ ನೋಂದಣಿಗಳು 15ನೇ ಸೆಪ್ಟೆಂಬರ್ 2021 ರಿಂದ ಪ್ರಾರಂಭವಾಯಿತು. ದೇಶದಲ್ಲಿ ಸಂಚಾರದ ಚಲನಶೀಲತೆಗೆ ಉತ್ತೇಜನ ನೀಡಲು ಸರ್ಕಾರ ತೆಗೆದುಕೊಂಡ ಕ್ರಮಗಳಲ್ಲಿ ಬಿಹೆಚ್ ಸರಣಿಯ ನಂಬರ್ ಪ್ಲೇಟ್‌ಗಳ ಪರಿಚಯ ಒಂದಾಗಿದೆ.
SHOCKING NEWS: 4 ವರ್ಷದ ಕಂದನನ್ನೇ ಕೊಚ್ಚಿ ಕೊಲೆಗೈದ ತಾಯಿ
ಈ ಸರಣಿಯ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ಮಾಲೀಕರು ಬೇರೆ ರಾಜ್ಯಕ್ಕೆ ಹೋದಾಗಲೆಲ್ಲಾ ಹೊಸ ನೋಂದಣಿ ಮಾಡಿಸಬೇಕಾದ ಅಗತ್ಯವಿರುವುದಿಲ್ಲ. ಈ ಸರಣಿಯು, ಅನ್ಯ ರಾಜ್ಯಗಳಿಗೆ ಹೋಗಿ ನೆಲೆಸಬೇಕಾದ ಅಗತ್ಯವಿರುವ ಎಲ್ಲಾ ವೃತ್ತಿಪರರಿಗೆ ಪ್ರಯೋಜನಕರವಾಗಿದೆ.
ಬಿಎಚ್ ಸರಣಿಯ ಅನುಕೂಲಗಳು
ಈ ಹಿಂದೆ, ಮೋಟಾರು ವಾಹನ ಕಾಯಿದೆ, 1988 ರ ಸೆಕ್ಷನ್ 47 ರ ಪ್ರಕಾರ, ಮಾಲೀಕರು ತಮ್ಮ ವಾಹನವನ್ನು 12 ತಿಂಗಳವರೆಗೆ ಬೇರೆ ರಾಜ್ಯದಲ್ಲಿ ಇರಿಸಲು (ಅವರು ನೋಂದಾಯಿಸಿದ ರಾಜ್ಯದಿಂದ ಭಿನ್ನವಾದ ರಾಜ್ಯ) ಮಾತ್ರ ಅನುಮತಿ ಇತ್ತು. ಈ ಅವಧಿಯ ನಂತರ, ವಾಹನದ ನೋಂದಣಿಯನ್ನು ತವರು ರಾಜ್ಯದಿಂದ ಹೊಸ ರಾಜ್ಯಕ್ಕೆ ವರ್ಗಾಯಿಸಬೇಕಾಗಿತ್ತು. ಬಿಎಚ್ ಸರಣಿಯೊಂದಿಗೆ ನೋಂದಾಯಿಸಲಾದ ವಾಹನ ದೇಶದ ಬೇರೆ ಯಾವುದೇ ರಾಜ್ಯಕ್ಕೆ ಹೋದರೂ ವರ್ಗಾವಣೆ ನೋಂದಣಿ ಅಗತ್ಯವಿರುವುದಿಲ್ಲ. ದೇಶದಾದ್ಯಂತ ನಂಬರ್ ಪ್ಲೇಟ್ ಮಾನ್ಯವಾಗಿರುತ್ತದೆ.
ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನಗಳ ತಡೆರಹಿತ ವರ್ಗಾವಣೆ ಮತ್ತು ವಾಹನ ವರ್ಗಾವಣೆಗಾಗಿ ಭಾರೀ ದಾಖಲೆಗಳನ್ನು ಹೊತ್ತೊಯ್ಯಬೇಕಾದ ಅನಿವಾರ್ಯತೆಯಿಂದ ವಾಹನ ಮಾಲೀಕರನ್ನು ಮುಕ್ತಗೊಳಿಸುವುದರ ಹೊರತಾಗಿ, ಬಿಎಚ್ ಸರಣಿಯು ಇತರ ಪ್ರಯೋಜನಗಳನ್ನು ನೀಡುತ್ತದೆ.
ಉದಾಹರಣೆಗೆ, ಹೊಸ ನಂಬರ್ ಪ್ಲೇಟ್‌ನೊಂದಿಗೆ, ವಾಹನದ ಮಾಲೀಕರು ಒಂದೇ ಬಾರಿಗೆ ಕೇವಲ ಎರಡು ವರ್ಷಗಳ ರಸ್ತೆ ತೆರಿಗೆಯನ್ನು ಪಾವತಿಸಲು ಬದ್ಧರಾಗಿರುತ್ತಾರೆ, ಇದು 15 ಅಥವಾ 20 ವರ್ಷಗಳ ಅವಧಿಗಿಂತ ಭಿನ್ನವಾಗಿದೆ (ರಾಜ್ಯದಿಂದ ರಾಜ್ಯಕ್ಕೆ) 2 ವರ್ಷಗಳ ನಂತರ ಯಾರಾದರೂ ತೆರಿಗೆ ಪಾವತಿಸಲು ವಿಫಲವಾದರೆ, ತೆರಿಗೆಯ ಹೊರೆ ದಿನದಿಂದ ದಿನಕ್ಕೆ 100 ರೂಪಾಯಿಗಳಷ್ಟು ಹೆಚ್ಚಾಗಲು ಆರಂಭಿಸುತ್ತದೆ.
ಬಿಎಚ್ ಸರಣಿಯ ನಂಬರ್ ಪ್ಲೇಟ್ ಪಡೆಯುವುದು ಹೇಗೆ ?
ಬಿಎಚ್ ಸರಣಿಯ ನಂಬರ್ ಪ್ಲೇಟ್ ಪಡೆಯುವ ಪ್ರಕ್ರಿಯೆ ಆನ್ಲೈನ್ ಆಗಿದೆ. ವಾಹನ ಖರೀದಿ ಸಮಯದಲ್ಲಿ, ವಾಹನ್ ಪೋರ್ಟಲ್ ಮೂಲಕ ವಿತರಕರು ವಾಹನಗಳನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ, ವಾಹನ ಮಾಲೀಕರು ತಮ್ಮ ಬಿಎಚ್ ಸರಣಿಯಲ್ಲಿ ತಮ್ಮ ನಂಬರ್ ಪ್ಲೇಟ್ ಪಡೆಯುತ್ತಾರೆ.
ಬಿಎಚ್ ಸರಣಿಯ ನಂಬರ್ ಪ್ಲೇಟ್ ಹೇಗಿರುತ್ತದೆ ?
ಖಾಸಗಿ ವಾಹನಗಳಿಗೆ ಕಪ್ಪು ಅಕ್ಷರಾಂಕಿಗಳನ್ನು ಬಿಳಿ ಹಿನ್ನೆಲೆಯಲ್ಲಿ ಕೊಟ್ಟಿರುವ ನಂಬರ್ ಪ್ಲೇಟ್ ಸಾಮಾನ್ಯವಾಗಿರುತ್ತದೆ. ಆದಾಗ್ಯೂ, ಅಕ್ಷರಾಂಕಿಗಳ ಸ್ವರೂಪದಲ್ಲಿ ಬದಲಾವಣೆ ಇರುತ್ತದೆ.
ಫಾರ್ಮ್ಯಟ್- YY BH #### ZZ
ಬಿಎಚ್ ಸರಣಿಯ ನಂಬರ್ ಪ್ಲೇಟ್‌ಗಳು ನೋಂದಣಿಯ ವರ್ಷ ತೋರಿಸುವ ಎರಡು ಸಂಖ್ಯೆಗಳೊಂದಿಗೆ ಪ್ರಾರಂಭವಾಗುತ್ತವೆ, ನಂತರ ಬರುವ ’BH’ ‘ಭಾರತ್’ ಅನ್ನು ಪ್ರತಿನಿಧಿಸುತ್ತದೆ. ನಂತರದಲ್ಲಿ, 0000 ರಿಂದ 9999 ರವರೆಗಿನ ಅಂಕಿಗಳನ್ನು ‘AA’ ನಿಂದ ‘ZZ’ ನಡುವಿನ ಎಲ್ಲಾ ಸಂಯೋಜನೆಗಳಲ್ಲಿರುವ ಅಕ್ಷರಗಳನ್ನು ಬಳಸಲಾಗುತ್ತದೆ. ಆದರೆ ‘ಐ’ ಮತ್ತು ‘ಓ’ ಅಕ್ಷರಗಳನ್ನು ಬಳಸಲಾಗುವುದಿಲ್ಲ
ಬಿಎಚ್ ಸರಣಿಯ ವಾಹನಗಳ ತೆರಿಗೆ ರಚನೆಯಲ್ಲಿ ಯಾವುದೇ ಬದಲಾವಣೆಗಳಿವೆಯೇ ?
ಹೊಸ ಬಿಎಚ್ ಸರಣಿಯು ತೆರಿಗೆ ರಚನೆಯಲ್ಲಿ ಬದಲಾವಣೆ ಹೊಂದಿದೆ. ಈ ಹೊಸ ತೆರಿಗೆ ರಚನೆ ಅನುಸಾರ, ವಾಹನವು ಹತ್ತು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಮೌಲ್ಯದ್ದಾಗಿದ್ದರೆ, ಅದರ ಮಾಲೀಕರು ಅದರ ಮೌಲ್ಯದ 8%ನಷ್ಟು ರಸ್ತೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ವಾಹನದ ಬೆಲೆ 10-20 ಲಕ್ಷದ ನಡುವೆ ಇದ್ದರೆ, 12%ನಷ್ಟು ದುಡ್ಡನ್ನು ರಸ್ತೆ ತೆರಿಗೆಯಾಗಿ ಪಾವತಿಸಬೇಕಾಗುತ್ತದೆ. ಅದೇ ರೀತಿ ವಾಹನದ ಬೆಲೆ ಇಪ್ಪತ್ತು ಲಕ್ಷಕ್ಕಿಂತ ಹೆಚ್ಚಿದ್ದರೆ, ಬೆಲೆಯ 12%ನಷ್ಟನ್ನು ರಸ್ತೆ ತೆರಿಗೆ ರೂಪದಲ್ಲಿ ಕಟ್ಟಬೇಕಾಗುತ್ತದೆ.
ವಾಹನಗಳ ಶಕ್ತಿಯ ಮೂಲವನ್ನು ಪರಿಗಣಿಸಿ ವಿವಿಧ ವಾಹನಗಳಿಗೆ ಭಿನ್ನವಾದ ತೆರಿಗೆ ವಿಧಿಸಲಾಗುತ್ತದೆ. ಉದಾಹರಣೆಗೆ: ಡೀಸೆಲ್ ಎಂಜಿನ್ ಹೊಂದಿರುವ ವಾಹನಗಳು ಅವುಗಳ ಬೆಲೆಯ ವರ್ಗಗಳಿಗೆ ಅನುಗುಣವಾಗಿ ಎರಡು ಪ್ರತಿಶತ ಹೆಚ್ಚುವರಿ ತೆರಿಗೆ ವಿಧಿಸಲ್ಪಟ್ಟಿರುತ್ತವೆ. ಅದೇ ಎಲೆಕ್ಟ್ರಿಕ್ ಎಂಜಿನ್ ಹೊಂದಿರುವ ವಾಹನದಿಂದ ಮಾಲೀಕರಿಗೆ ಅದೇ ಶೇಕಡಾ ಎರಡರಷ್ಟು ತೆರಿಗೆ ಉಳಿತಾಯ ಮಾಡುತ್ತದೆ.