ಟಿವಿ ವೀಕ್ಷಣೆಯಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿರೋ ಪುರುಷರು ಓದಲೇಬೇಕಾದ ಸ್ಟೋರಿ ಇದು. ಯಾಕಂದ್ರೆ ಸಂಶೋಧನೆಯೊಂದರ ಪ್ರಕಾರ ದಿನಕ್ಕೆ 5 ಗಂಟೆಗಳ ಕಾಲ ಟಿವಿ ವೀಕ್ಷಿಸುವ ಪುರುಷರ ವೀರ್ಯಾಣು ಶೇ.35ರಷ್ಟು ಕಡಿಮೆಯಾಗುತ್ತದೆ.
ಅತಿಯಾಗಿ ಟಿವಿ ನೋಡುವುದರ ಜೊತೆಗೆ ಜಂಕ್ ಫುಡ್ ಸೇವನೆ ಕೂಡ ಜಾಸ್ತಿಯಾಗುತ್ತದೆ. ಆಲಸ್ಯತನ ಆವರಿಸಿಕೊಳ್ಳುತ್ತದೆ. ದಿನಕ್ಕೆ ಒಂದೊಂದು ಗಂಟೆ ಹೆಚ್ಚುವರಿಯಾಗಿ ಟಿವಿ ನೋಡಿದಾಗ ಮಾರಕ ಪಲ್ಮನರಿ ಎಂಬಾಲಿಸಮ್ ಶೇ.45ರಷ್ಟು ಹೆಚ್ಚಾಗುತ್ತದೆ. ಇದರಿಂದಾಗಿ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪುವ ಅಪಾಯವಿರುತ್ತದೆ.
ಯಾರು ವಾರಕ್ಕೆ ಕನಿಷ್ಠ 20 ಗಂಟೆ ಟಿವಿ ನೋಡುತ್ತಾರೋ ಅವರಲ್ಲಿ ವೀರ್ಯಾಣುಗಳ ಸಂಖ್ಯೆ ಟಿವಿ ವೀಕ್ಷಿಸದೇ ಇರುವವರಿಗಿಂದ ಶೇ.50ರಷ್ಟು ಕಡಿಮೆಯಾಗಿರುತ್ತದೆ.
ಯಾರು ಹೆಚ್ಚು ಟಿವಿ ವೀಕ್ಷಿಸುತ್ತಾರೋ ಅವರಲ್ಲಿ ಇತರರಿಗಿಂತ ವೀರ್ಯಾಣುಗಳ ಸಂಖ್ಯೆ ಶೇ.35ರಷ್ಟು ಕಡಿಮೆಯಿತ್ತು. ದೈಹಿಕವಾಗಿ ಅತ್ಯಂತ ಚಟುವಟಿಕೆಯಿಂದ, ಚುರುಕಾಗಿರುವವರಲ್ಲಿ ವೀರ್ಯಾಣುಗಳ ಸಂಖ್ಯೆ ಅಧಿಕವಾಗಿರುವುದು ಕಂಡು ಬಂದಿದೆ.