ಕೆಲವು ಸಣ್ಣ ಸಣ್ಣ ವಿಷಯಗಳೇ ನಿಮ್ಮ ದಾಂಪತ್ಯದಲ್ಲಿ ಕಲಹ ಮೂಡಲು ಕಾರಣವಾದೀತು. ಅವುಗಳ ಬಗ್ಗೆ ಸ್ವಲ್ಪ ಎಚ್ಚರ ವಹಿಸದಿದ್ದರೆ ಜೀವನಚಕ್ರ ಅಸ್ತವ್ಯಸ್ತವಾದೀತು.
ಯಾವುದೇ ಕಾರಣಕ್ಕೆ ಸಂಗಾತಿಯನ್ನು ಕಡೆಗಣಿಸದಿರಿ. ಅವರಿಗಾಗಿ ಸಮಯ ನೀಡಿ. ವಾರಕ್ಕೊಮ್ಮೆ ಅಥವಾ ತಿಂಗಳಿಗೆರಡು ಬಾರಿ ಶಾಪಿಂಗ್ ಹೋಗಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವಾಗ ಒಬ್ಬರಿಗೊಬ್ಬರು ಮಾತನಾಡಿಕೊಂಡೇ ನಿರ್ಧರಿಸಿ.
ಸಣ್ಣ ಸಣ್ಣ ವಿಷಯಕ್ಕೂ ಟೀಕೆ ಮಾಡುವುದನ್ನು ಬಿಟ್ಟು ಬಿಡಿ. ಇದೇ ಮುಂದೆ ನಿಮ್ಮಿಬ್ಬರಲ್ಲಿ ದೊಡ್ಡ ಕಲಹವನ್ನು ಉಂಟು ಮಾಡಬಹುದು. ಆಕೆ ದಪ್ಪಗಿದ್ದಾಳೆ ಎಂಬ ಕಾರಣಕ್ಕೆ ನೀವು ಟೀಕೆ ಮಾಡುತ್ತಿದ್ದರೆ ಏನೂ ಲಾಭವಿಲ್ಲ, ಬದಲಾಗಿ ಜೊತೆಯಾಗಿ ಕುಳಿತು ತೆಳ್ಳಗಾಗುವ ಪ್ಲಾನ್ ಮಾಡಿ.
ಜೊತೆಗಾರರು ಸಂಕಷ್ಟದಲ್ಲಿದ್ದಾರೆ ಎಂಬುದು ತಿಳಿದಾಗ ಭಾವನಾತ್ಮಕವಾಗಿ ಬೆಂಬಲ ನೀಡಿ. ಕೆಲವೊಮ್ಮೆ ನಿಮಗೂ ಆರ್ಥಿಕ ಸಮಸ್ಯೆಗಳಿರಬಹುದು. ಸಂಗಾತಿಯ ಸಂಕಷ್ಟಕ್ಕೆ ನೆರವಾಗಲು ಸಾಧ್ಯವಾಗದಿರಬಹುದು. ಆದರೆ ಸದಾ ಅವರೊಂದಿಗಿದ್ದು ಧೈರ್ಯ ತುಂಬಲು ಮರೆಯದಿರಿ.