ಬೆಂಗಳೂರು : ಲೋಕ್ಯಾಂಟೋ ಡೇಟಿಂಗ್ ಆ್ಯಪ್ ಬಳಸುವವರೇ ಎಚ್ಚರ, ಆನ್ ಲೈನ್ ನಲ್ಲಿ ಹುಡುಗಿಯರ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ವೊಂದನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.
ಹೌದು, ಹುಡುಗಿಯರ ಹೆಸರಿನಲ್ಲಿ ಡೇಟಿಂಗ್ ನೆಪದಲ್ಲಿ ವಂಚನೆ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನದೀಂಪಾಷಾ ಹಾಗೂ ನಾಗೇಶ್ ಬಂಧಿತ ಆರೋಪಿಗಳು
ಲೋಕ್ಯಾಂಟೋ ಆ್ಯಪ್ ನಲ್ಲಿ ಹುಡುಗಿಯರ ಹೆಸರಿನಲ್ಲಿ ನಕಲಿ ಅಕೌಂಟ್ ಕ್ರಿಯೆಟ್ ಮಾಡಿ ಹುಡುಗರನ್ನು ಸಂಪರ್ಕಿಸಿ ಮೋಸದ ಬಲೆಗೆ ಕೆಡುವುತ್ತಿದ್ದರು. ಮೊದಲಿಗೆ ಮೆಸೇಜ್ ಮಾಡಿ, ಸಲುಗೆ ಮಾತು ಬೆಳೆಸಿದ ನಂತರ ಲೋಕೇಷನ್ ಕಳುಹಿಸಿ ಕರೆಸಿಕೊಳ್ಳುತ್ತಿದ್ದರು. ಹೋದಾಗ ಗ್ಯಾಂಗ್ ಅಲರ್ಟ್ ಆಗಿ ಸುಲಿಗೆ ಮಾಡುತ್ತಿದ್ದರು. ಚಾಕು ತೋರಿಸಿ ಆಟೋದಲ್ಲಿ ಕಿಡ್ನಾಪ್ ಮಾಡಿ, ಚಿನ್ನಾಭರಣ ದೋಚಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು.
ಇತ್ತೀಚೆಗೆ ವ್ಯಕ್ತಿಯೊಬ್ಬರನ್ನು ಮೋಸದ ಬಲೆ ಕೆಡವಿ 60 ಸಾವಿರ ರೂ. ಸುಲಿಗೆ ಮಾಡಿದ್ದರು. ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧ ಇಂದು ಹೆಚ್ ಎಸ್ ಆರ್ ಲೇಔಟ್ ಠಾಣೆ ಪೊಲೀಸರು ಇಬ್ಬರು ಬಂಧಿಸಿದ್ದಾರೆ.