
ಗ್ವಾಲಿಯರ್(ಮಧ್ಯಪ್ರದೇಶ): ಗ್ವಾಲಿಯರ್‌ನಲ್ಲಿ ‘ಬಿಸಿಲ್ಲೇರಿ’ ಎಂದು ಲೇಬಲ್ ಮಾಡಿದ ಪ್ಯಾಕೇಜ್ ನೀರಿನ ಬಾಟಲಿಯ ನೀರನ್ನು ಕುಡಿದ ತಕ್ಷಣ ವ್ಯಕ್ತಿಯ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಸ್ಲೇರಿ ಎಂದು ಕನ್ಫ್ಯೂಸ್ ಮಾಡಿಕೊಂಡು Bissilleri ವಾಟರ್ ಬಾಟಲ್ ನೀರು ಕುಡಿದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸದ್ಯ ಸಂತ್ರಸ್ತನ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಸಲಾಗಿದೆ. ಗ್ವಾಲಿಯರ್‌ನ ಆಪಗಂಜ್ ನಿವಾಸಿ ಸಂತ್ರಸ್ತ ನದೀಮ್ ಖಾನ್ ಅವರು ಬಾಯಾರಿಕೆ ಕಾರಣ ಶೀಟ್ಲಾ ಡೈರಿಯಿಂದ ಬಾಟಲಿ ನೀರನ್ನು ಖರೀದಿಸಿದ್ದಾರೆ. ಅವರು ಬಾಟಲಿಯಿಂದ ನೀರು ಕುಡಿದ ತಕ್ಷಣ ತೀವ್ರವಾದ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಅವರನ್ನು ತಕ್ಷಣವೇ ಗ್ವಾಲಿಯರ್‌ನ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನದೀಂನ ಸಹೋದರ ತಾಹಿರ್ ಖಾನ್ ಅವರು ಬಾಟಲಿಯನ್ನು ಸಾಕ್ಷ್ಯವಾಗಿ ಇಟ್ಟುಕೊಂಡು ಬಹೋದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಯಾವುದೇ ಬ್ರಾಂಡ್‌ನ ಪ್ಯಾಕೇಜಿಂಗ್‌ನ ಹೆಸರನ್ನು ನಕಲಿಸುವ/ಅನುಕರಿಸುವ ಉತ್ಪನ್ನಗಳನ್ನು ನಕಲಿ ಉತ್ಪನ್ನಗಳು ಎಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಒಂದೇ ಒಂದು ಅಕ್ಷರ ಚೇಂಜ್ ಮಾಡಿ ಪ್ರಖ್ಯಾತ ಕಂಪನಿಗಳ ಉತ್ಪನ್ನಗಳನ್ನು ಅವರ ರೀತಿಯಲ್ಲೇ ನಕಲಿ ಹೆಸರಿನಿಂದ ಮಾರಾಟ ಮಾಡಲಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಅದರ ಮಧ್ಯೆ ಈ ಪ್ರಕರಣ ಆಘಾತ ತರುವಂತಿದೆ.
ಉದಾಹರಣೆಗೆ ನಿಜವಾದ ಉತ್ಪನ್ನ ಬಿಸ್ಲೇರಿ(Bisleri) ಆಗಿದ್ದು, ಅದೇ ರೀತಿಯಲ್ಲೇ ಬಿಸಿಲೇರಿ, ಬಿಸ್ಲಾರಿ, ಬೆಲ್ಸೇರಿ, ಬಿಲ್ಸೇರೀ, ಬ್ರಿಸ್ಲಿ(Bisilleri, Bislari, Belseri, Bilseri, Brislei) ಇತ್ಯಾದಿ ನಕಲಿ ಉತ್ಪನ್ನಗಳಿವೆ.